Publish Date: Thu, 03 Nov 2022 (07:56 IST)
Updated Date: Thu, 03 Nov 2022 (09:24 IST)
ಮಂಡ್ಯ : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ರಸ್ತೆ ಕಾಮಗಾರಿ ಅಂತಿಮ ಘಟ್ಟಕ್ಕೆ ತಲುಪಿದ್ದು, ನವೆಂಬರ್ ಅಂತ್ಯದ ವೇಳೆಗೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ಮದ್ದೂರು ಬೈಪಾಸ್ ಕೆಲಸ ಬಹುತೇಕ ಕಂಪ್ಲೀಟ್ ಆಗಿದೆ. ಎಕ್ಸ್ಪೆನ್ಷನ್ ಜಾಯಿಂಟ್ಸ್ ಕೆಲಸ ಮಾತ್ರ ಬಾಕಿ ಇದೆ. 10-15 ದಿನದಲ್ಲಿ ಆ ಕೆಲಸವು ಮುಗಿಯುವ ಭರವಸೆ ಇದೆ.
ಮಂಡ್ಯ, ಶ್ರೀರಂಗಪಟ್ಟಣ ಬೈಪಾಸ್ ಕೂಡ ಡಿಸೆಂಬರ್ ವೇಳೆಗೆ ಕಂಪ್ಲೀಟ್ ಆಗಲಿದೆ. ಹೊಸ ವರ್ಷದಿಂದ ಸರಾಗವಾಗಿ ಬೆಂಗಳೂರು-ಮೈಸೂರಿಗೆ ಸಂಚಾರ ಮಾಡಬಹುದು ಎಂದಿದ್ದಾರೆ.