ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೋ ಪಾದಯಾತ್ರೆ ರಾಜ್ಯದಲ್ಲಿ ಮುಕ್ತಾಯವಾಗಿದೆ.ತೆಲಂಗಾಣದಲ್ಲಿ ಮುಂದುವರಿದಿದೆ.ಕಾಲ್ನಡಿಗೆ ಯಾತ್ರೆಯ ಸಕ್ಸಸ್ ಮರೆತು ಬಿಟ್ರೆ ಕಷ್ಟ ಅನ್ನೋದು ಕಾಂಗ್ರೆಸ್ ನಾಯಕರ ಗಮನಕ್ಕೆ ಬಂದಿದೆ.ಹೀಗಾಗಿ ಇದೇ ಹುರುಪು,ಹುಮ್ಮಸ್ಸನ್ನ ಉಳಿಸಿಕೊಳ್ಳಬೇಕಿದೆ.ಹಾಗಾಗಿ ಯಾತ್ರೆ ಪಾಲಿಟಿಕ್ಸ್ ಮುಂದುವರೆಸಬೇಕಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.ಸಾಲು ಸಾಲು ಸಮಾವೇಶಗಳು,ಪಾದಯಾತ್ರೆಗಳು,ಸರಣಿ ಸಭೆಗಳನ್ನ ಹಮ್ಮಿಕೊಳ್ಳೋಕೆ ಮುಂದಾಗಿದ್ದಾರೆ.ಹಾಗಾಗಿ ನವೆಂಬರ್ ಮಾಸಾಂತ್ಯದೊಳಗೆ ಸಾಮೂಹಿಕ ನಾಯಕತ್ವದಲ್ಲಿ ರಥಯಾತ್ರೆಯನ್ನ ಮಾಡೋಕೆ ಹೊರಟಿದ್ದಾರೆ.ಹೈಕಮಾಂಡ್ ಒಪ್ಪಿಗೆ ಪಡೆಯಲು ದೆಹಲಿಯಲ್ಲಿ ವೇಣಗೋಪಾಲ್ ಭೇಟಿ ಮಾಡಿ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ.