Select Your Language

Notifications

webdunia
webdunia
webdunia
webdunia

ಬಾಲಕಿಯ ರಕ್ಷಣೆಗೆ ನಿಂತ ಶ್ವಾನ

ಬಾಲಕಿಯ ರಕ್ಷಣೆಗೆ ನಿಂತ ಶ್ವಾನ
bangalore , ಮಂಗಳವಾರ, 25 ಅಕ್ಟೋಬರ್ 2022 (17:11 IST)
ಪ್ರಾಣಿಗಳಿಗೆ ನೀವು ಎಷ್ಟು ಪ್ರೀತಿ ಕೊಟ್ಟರೂ ಅದು ನಿಮಗೆ ಮತ್ತೆ ವಾಪಸ್​ ಸಿಗುತ್ತದೆ. ಏಕೆಂದರೆ  ಅವುಗಳು ನಿಷ್ಕಲ್ಮಶ ಪ್ರೀತಿಯನ್ನು ತೋರುತ್ತವೆ. ಅದರಲ್ಲಿ ಶ್ವಾನ ಕೂಡ ಒಂದು. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್​​​ ಆಗ್ತಿದ್ದು, ಮುದ್ದು ಶ್ವಾನದ ಪ್ರೀತಿಗೆ ನೆಟ್ಟಿಗರು ಶರಣಾಗಿದ್ದಾರೆ. ಶ್ವಾನಗಳ ನಿಯತ್ತಿಗೆ ಉದಾಹರಣೆಯಾಗುವಂತೆ, ಈ ವಿಡಿಯೋದಲ್ಲಿ ಶ್ವಾನವೂ ಬಾಲಕಿಯೊಂದಿಗೆ ಇರುತ್ತೆ. ಇಬ್ಬರ ಸುತ್ತಲೂ ಹಸುಗಳು ಇರುತ್ತವೆ. ಒಂದು ಹಸು ಬಾಲಕಿಗೆ ಹಾಯಲು ಬರುತ್ತದೆ. ಆದರೆ ಅಷ್ಟರಲ್ಲಿ ಶ್ವಾನವೂ ಹಾಯಲು ಬಂದ ಹಸುವನ್ನು ತಡೆಯುತ್ತದೆ. ಹೀಗೆ ಎರಡು ಬಾರಿಯೂ ನಡೆಯುತ್ತದೆ. ಬಾಲಕಿಯ ರಕ್ಷಣೆಗೆ ನಿಂತ ಈ ಶ್ವಾನದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಲಾಸ್ಮಾ ಬದಲಿಗೆ ಮೂಸಂಬಿ ರಸ!