Publish Date: Tue, 25 Oct 2022 (15:09 IST)
Updated Date: Tue, 25 Oct 2022 (15:15 IST)
ಜಾಗಿಂಗ್ ಮಾಡ್ತಿದ್ದ ವೇಳೆ ಯುವಕ ಕುಸಿದು ಬಿದ್ದಿರುವ ದುರ್ಘಟನೆ ಜಾಲಹಳ್ಳಿಯ ಬಿಇಎಲ್ ಗ್ರೌಂಡ್ ನಲ್ಲಿ ನಡೆದಿದೆ.ಇಂದು ಬೆಳಗ್ಗೆ ಜಾಗಿಂಗ್ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದಾನೆ.ತಕ್ಷಣ ವಾಯುವಿಹಾರಿಗಳು ಆಸ್ಪತ್ರೆ ಗೆ ಸೇರಿಸಿದ್ದಾರೆ.ಆದರೆ ಸ್ಥಳದಲ್ಲೇ ಯುವಕ ಪ್ರಾಣ ಬಿಟ್ಟಿದ್ದಾನೆ.ಮೃತ ಯುವಕನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.ಜಾಲಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.