Publish Date: Tue, 25 Oct 2022 (14:44 IST)
Updated Date: Tue, 25 Oct 2022 (15:05 IST)
ಕಾಂಗ್ರೆಸ್ ನ ಪೇ ಸಿಎಂ ಅಭಿಯಾನ ಹಿನ್ನೆಲೆ ಕೆಪಿಸಿಸಿ ಕಾರ್ಯಕರ್ತರಿಗೆ ಸಿಸಿಬಿ ನೊಟೀಸ್ ನೀಡಿದೆ.ಐವರು ಸೋಶಿಯಲ್ ಮಿಡಿಯಾ ಸಿಬ್ಬಂದಿಗೆ ಮೂರನೇ ಬಾರಿಗೆ ಸಿಸಿಬಿ ನೋಟಿಸ್ ನೀಡಿದೆ.ಇಂದು ಬೆ.೧೦.೩೦ ಕ್ಕೆ ವಿಚಾರಣೆಗೆ ಬುಲಾವ್ ನೀಡಿದೆ.ಸಂಜಯ್,ವಿಶ್ವಮೂರ್ತಿ ಸೇರಿ ಐವರಿಗೆ ನೊಟೀಸ್ ನೀಡಿದ್ದು,ಇಂದು ಕಾರ್ಯಕರ್ತರು ವಿಚಾರಣೆಗೆ ಹಾಜರಾಗಲಿದ್ದಾರೆ.ಎರಡು ಬಾರಿ ಸಿಸಿಬಿ ವಿಚಾರಣೆಗೆ ಕರೆದಿದ್ದು,ಐವರು ಕಾರ್ಯಕರ್ತರು ಲಿಖಿತ ವಿವರಣೆ ಒದಗಿಸಿದ್ದಾರೆ.
ಇಂದು ಮೂರನೇ ನೊಟೀಸ್ ಗೆ ಖುದ್ದು ಹಾಜರಾಗುವಂತೆ ನೋಟಿಸ್ ನೀಡಿದ್ದು,ಸಾಕಷ್ಟು ಮುಜುಗರ ಸೃಷ್ಠಿಸಿದ್ದ ಪೇಸಿಎಂ ಅಭಿಯಾನದಿಂದ ಸರ್ಕಾರ,ಸಿಎಂಗೆ ವೈಯುಕ್ತಿಕ ಮುಜುಗರ ತಂದಿಟ್ಟಿತ್ತು.ಹಾಗಾಗಿ ಸರ್ಕಾರ ತೀರ್ವವಾಗಿ ತೆಗೆದುಕೊಂಡಿತ್ತು.ಸಿಸಿಬಿ ಮೂಲಕ ಕಾರ್ಯಕರ್ತರಿಗೆ ಬಿಸಿ ಮುಟ್ಟಿಸಲು ನಿರ್ಧಾರ ಮಾಡಿದ್ದು,ಹೀಗಾಗಿ ಪದೇ ಪದೇ ಸಿಸಿಬಿ ನೊಟೀಸ್ ನೀಡಿದೆ.