Publish Date: Mon, 24 Oct 2022 (19:09 IST)
Updated Date: Mon, 24 Oct 2022 (19:12 IST)
ಅತೀಯಾದ ವೇಗ ಬೈಕ್ ಸವಾರನಿಗೆ ಅಪತ್ತು ತಂದಿದೆ. ಎಲೆಕ್ಟ್ರಾನಿಕ್ ಸಿಟಿ ಪ್ಲೇಓವರ್ ಮೇಲೆ ಪಲ್ಸರ್ ಬೈಕಿನಲ್ಲಿ ಅತಿ ವೇಗವಾಗಿ ಚಲಯಾಸಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪ್ಲೇಓವರ್ ನಿಂದ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಬೈಕ್ ಸವಾರ ಕೊರೆ ನಾಗಾರ್ಜುನ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆಂಧ್ರ ಪ್ರದೇಶ ಮೂಲದ ಕೊರೆ ನಾಗಾರ್ಜುನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ.
ಮಧ್ಯಾಹ್ನ ಬೊಮ್ಮನಹಳ್ಳಿ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಹೋಗ್ಬೇಕಾದ್ರೆ ಘಟನೆ ನಡೆದಿದೆ.ಇಂದು ಹಬ್ಬವಾದರಂದ ಸಿಲಿಕಾನ್ ಸಿಟಯ ಬಹುತೇಕ ರಸ್ತೆಗಳು ಖಾಲಿಯಾಗಿದ್ದವು ಅದರಲ್ಲಿಯೂ ಫ್ಲೈ ಓವರ್ ಮೇಲೆ ಹೇಳಬೇಕಾ.? ಅತಿಯಾದ ಸ್ಪೀಡಾಗಿ ಹೋಗಿದ್ದಾನೆ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರೆ ಕಡೆಗೆ ಟರ್ನ್ ಮಾಡುವಾಗ ಆಯತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾನೆ. ಮೇಲಿಂದ ಕೆಳಗೆ ಬಿದ್ದಾಗ ತಲೆಗೆ ತೀರ್ವವಾದ ಪೆಟ್ಟಾಗಿ ಸ್ಥಳದಲ್ಲಿ ಯೇ ಸಾವನ್ನಪಿದ್ದಾನೆ ಒಂದು ವೇಳೆ ಮೇಲಿಂದ ಬಿದ್ದಾಗ ಯಾವುದಾದರೂ ವಾಹನದ ಮೇಲೆ ಬಿದ್ದಿದ್ದರೆ ಮತ್ತೊಂದು ದುರಂತ ನಡೆದು ಹೋಗುತ್ತಿತ್ತು .ಘಟನೆ ಬಗ್ಗೆ
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.