Select Your Language

Notifications

webdunia
webdunia
webdunia
webdunia

ಕೋರಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ- ಖತರ್ನಾಕ್ ಕಳ್ಳರು ಅಂದರ್

Koramangala police's big operation
bangalore , ಸೋಮವಾರ, 24 ಅಕ್ಟೋಬರ್ 2022 (17:20 IST)
ನಗರದಲ್ಲಿ ಮೊಬೈಲ್ ಸ್ನ್ಯಾಚಿಂಗ್ ಮಾಡ್ತಿದ್ದ ಖತರ್ನಾಕ್ ಇಬ್ಬರು ಆರೋಪಿಗಳನ್ನ  ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.ಸಜ್ಜದ್, ಅರುಣ್ ಬಂಧಿತ ಆರೋಪಿಗಳಾಗಿದ್ದು,ಒಂಟಿಯಾಗಿ ಓಡಾಡೋರನ್ನ ಟಾರ್ಗೆಟ್ ಮಾಡಿ ಮೊಬೈಲ್ ಕದಿಯುತ್ತಿದ್ರು.ಬಂಧಿತರಿಂದ 7ಲಕ್ಷ ಮೌಲ್ಯದ 40 ಮೊಬೈಲ್ ಗಳು ಜಪ್ತಿ ಮಾಡಲಾಗಿದೆ.ಬೇರೆ ಬೇರೆ ಠಾಣಾ ವ್ಯಾಪ್ತಿಗಳಲ್ಲೂ ಆರೋಪಿಗಳು ಕೈಚಳಕ ತೋರಿಸಿದ್ದಾರೆ.ಪುಟ್ಟೇನಹಳ್ಳಿ, ಮಡಿವಾಳ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿದ್ದಾರೆ.ಸದ್ಯ ಆರೋಪಿಗಳನ್ನ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಮೆಕಾನಿಕ್ ಆಗಿದ್ದ ಆರೋಪಿ ಸಜ್ಜಾದ್ ಲಿಂಗಾರಾಜಪುರದಲ್ಲಿ ಮೆಕ್ಯಾನಿಕ್ ಶಾಪ್ ಇಟ್ಟುಕೊಂಡಿದ್ದ.ಸರ್ವಿಸ್ ಗೆ ಬಂದ ಬೈಕ್ ಗಳನ್ನು ಕಳ್ಳತನ ಮಾಡೋದಕ್ಕೆ ಬಳಸುತ್ತಿದ್ದ.ಕದ್ದ ಮೊಬೈಲ್ ಗಳನ್ನು ತಮಿಳುನಾಡು ಕಡೆ ಮಾರಾಟ ಮಾಡುತ್ತಿದ್ದ.ಪ್ರತಿಷ್ಠಿತ ಕಂಪನಿಯ ಮೊಬೈಲ್ ಗಳನ್ನು ಕಳವು ಮಾಡ್ತಿದ್ದ ಆರೋಪಿ ಎಂಬುದು ತಿಳಿದು ಬಂದಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಗರದ ಹಲವು ಹೊಟೇಲ್ ಗಳಲ್ಲಿ ಅಪ್ಪು ಇಷ್ಟಪಾಡುವ ಬಗೆಬಗೆಯ ರುಚಿಕರವಾದ ಊಟ ಲಭ್ಯ