Select Your Language

Notifications

webdunia
webdunia
webdunia
webdunia

ಸಚಿವ ಸೋಮಣ್ಣ ಮಹಿಳೆ ಮೇಲೆ ಹಲ್ಲೆ ಮಾಡಿರುವುದನ್ನ ಖಂಡಿಸಿ ಭುಗಿಲೆದ್ದ ಧರಣಿ

ಸಚಿವ ಸೋಮಣ್ಣ ಮಹಿಳೆ ಮೇಲೆ ಹಲ್ಲೆ ಮಾಡಿರುವುದನ್ನ ಖಂಡಿಸಿ ಭುಗಿಲೆದ್ದ ಧರಣಿ
bangalore , ಸೋಮವಾರ, 24 ಅಕ್ಟೋಬರ್ 2022 (17:09 IST)
ಮಹಿಳೆ ‌ಮೇಲೆ ಸಚಿವ ಸೋಮಣ್ಣ ಹಲ್ಲೆ ಮಾಡಿರುವ ಹಿನ್ನೆಲೆ ಕಾಂಗ್ರೆಸ್ ಬೆಂಗಳೂರು ಘಟಕದಿಂದ ಪ್ರತಿಭಟನೆ ಮಾಡಲಾಗಿದೆ.ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಲಾಗಿದೆ.ಕಾಂಗ್ರೇಸ್ ಕಾರ್ಯಕರ್ತರು ಸೋಮಣ್ಣ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.ಅಲ್ಲದೇ ಕೂಡಲೇ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದರೆ.
 
ಇನ್ನೂ ರಾಜ್ಯ ಮಹಿಳಾ ಘಟಕದಿಂದಲೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರಾನಾಥ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ.ಮಹಿಳಾ ವಿರೋಧಿ ಸರ್ಕಾರಕ್ಕೆ ದಿಕ್ಕಾರ ಎಂದು  ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.
 
ಇದೇ ವೇಳೆ ಮಾತನಾಡಿದ ಕೈ ಮುಖಂಡ ಮನೋಹರ್ ಮನವಿಗೆ ಬಂದ ದಲಿತ ಮಹಿಳೆ ಮೇಲೆ ಸೋಮಣ್ಣ ಹಲ್ಲೆ ಮಾಡಿದ್ದಾರೆ.ಇದು ಮಹಿಳಾ ವಿರೋಧಿ ಬಿಜೆಪಿ ಸರ್ಕಾರ.ಸಿಎಂ ಕೂಡಲೇ ಸೋಮಣ್ಣನನ್ನ ವಜಾಗೊಳಿಸಬೇಕು.ಮಹಿಳೆ ಮೇಲೆ ಕಪಾಳ ಮೋಕ್ಷ ಮಾಡಿದ್ದಾರೆ.ಸರ್ಕಾರ ದಲಿತ ವಿರೋಧಿ ಅನ್ನುವುದು ಸಾಬೀತಾಗಿದೆ.ಇಲ್ಲವೇ ಸರ್ಕಾರದ ವಿರುದ್ಧ ಹೋರಾಟ ಮುಂದುವರೆಸ್ತೇವೆ ಎಂಬುದಾಗಿ ಒತ್ತಾಯ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಟಾಕಿ ಸಿಡಿತ ಮಿಂಟೋ ಆಸ್ಪತ್ರೆಯಲ್ಲಿ ನಾಲ್ಕನೇ ಕೇಸ್ ದಾಖಲು