Publish Date: Fri, 25 Feb 2022 (09:30 IST)
Updated Date: Fri, 25 Feb 2022 (09:41 IST)
ಚೆನ್ನೈ: ಊಟ ಕೊಡಿ ಎಂದು ಮನೆ ಬಾಗಿಲಿಗೆ ಬಂದ ವೃದ್ಧನಿಗೆ ಮನೆ ಒಡತಿ ಊಟ ಕೊಡಲು ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ವೃದ್ಧ ಹಲ್ಲೆ ನಡೆಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ವೃದ್ಧನನ್ನು ಕಂಬಕ್ಕೆ ಕಟ್ಟಿ ಹಾಕಿ ಹೊಡೆದು ಕೊಲೆ ಮಾಡಿದ್ದಾರೆ.
68 ವರ್ಷದ ಮಹಿಳೆ ಮನೆಗೆ ಬಂದಿದ್ದ ಅಪರಿಚಿತ ವೃದ್ಧ ಊಟ ಕೇಳಿದ್ದ. ಆದರೆ ಅಪರಿಚಿತ ವ್ಯಕ್ತಿಗೆ ಊಟ ಬಡಿಸಲು ಮಹಿಳೆ ಹಿಂದು ಮುಂದು ನೋಡಿದ್ದಳು. ಈ ಕಾರಣಕ್ಕೆ ವೃದ್ಧ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ.
ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಇಲೆಕ್ಟ್ರಿಕ್ ಕಂಬಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ. ಪರಿಣಾಮ ವೃದ್ಧ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪೊಲೀಸರು ಗ್ರಾಮಸ್ಥರ ಮೇಲೆ ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.