Select Your Language

Notifications

webdunia
webdunia
webdunia
Friday, 4 April 2025
webdunia

ಮನೆ ಕೆಲಸದಾಕೆಯಿಂದ ದರೋಡೆ: ಕೋಟಿ ರೂ. ಮೌಲ್ಯದ ಒಡವೆ ಕಳವು

ದರೋಡೆ
ಬೆಂಗಳೂರು , ಗುರುವಾರ, 24 ಫೆಬ್ರವರಿ 2022 (10:10 IST)
ಬೆಂಗಳೂರು: ಮನೆ ಕೆಲಸದಾಕೆಯ ಸಹಾಯದಿಂದ ನೇಪಾಳಿ ಗ್ಯಾಂಗ್ ಮನೆಗೆ ಕನ್ನ ಹಾಕಿ 1 ಕೋಟಿ ರೂ. ದರೋಡೆ ಮಾಡಿದ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.

ಪತಿ ಮತ್ತು ಪುತ್ರ ಕಾಲೇಜಿಗೆ ಹೋದ ಮೇಲೆ ಮನೆ ಒಡತಿ ಕೆಲಸದಾಕೆಯನ್ನು ಬಿಟ್ಟು ದೇವಸ್ಥಾನಕ್ಕೆ ಹೋಗಿದ್ದಳು. ಈ ವೇಳೆ ಮನೆ ಕೆಲಸದಾಕೆ ತನ್ನ ಪತಿ ಮತ್ತು ನೇಪಾಳಿ ಗ್ಯಾಂಗ್ ನ್ನು ಕರೆದುಕೊಂಡು ಮನೆಗೆ ಬಂದಿದ್ದಳು.

ಮನೆಯಲ್ಲಿದ್ದ 94 ಲಕ್ಷ ರೂ. ಮೌಲ್ಯದ ಚಿನ್ನ, 10 ಲಕ್ಷ ರೂ. ನಗದು ದೋಚಿದ್ದಾರೆ. ದರೋಡೆಕೋರರ ಗುಂಪು ಮನೆಯಲ್ಲಿದ್ದಾಗಲೇ ಒಡತಿ ಮನೆಗೆ ಬಂದಿದ್ದಾಳೆ. ಬಾಗಿಲು ತೆಗೆಯಲು ತಡವಾದಾಗ ಮಹಿಳೆ ಪ್ರಶ್ನಿಸಿದ್ದಾಳೆ. ಇದಕ್ಕೆ ಮನೆಕೆಲಸದಾಕೆ ವಾಶ್ ರೂಂನಲ್ಲಿದ್ದೆ ಎಂದು ಸುಳ್ಳು ಹೇಳಿದ್ದಾಳೆ. ಮನೆ ಒಳಗೆ ಬಂದ ಮೇಲೆ ಒಡತಿಯ ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಹಾಕಿ ಗ್ಯಾಂಗ್ ತನ್ನ ಕೆಲಸ ಮುಗಿಸಿದೆ.  ಈ ಬಗ್ಗೆ ಮಾಲಿಕರು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಕೊಂದು ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ತಂದೆ!