Publish Date: Wed, 23 Feb 2022 (10:10 IST)
Updated Date: Wed, 23 Feb 2022 (10:17 IST)
ಚಿಕ್ಕಬಳ್ಳಾಪುರ: ಆನ್ ಲೈನ್ ವ್ಯವಹಾರದಲ್ಲಿ ವಂಚನೆಗೊಳಗಾಗುವ ಎಷ್ಟೋ ಪ್ರಕರಣಗಳು ಕೇಳಿಬರುತ್ತವೆ. ಅಂತಹದ್ದೇ ಒಂದು ಪ್ರಕರಣ ಇಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಆನ್ ಲೈನ್ ತಾಣದಲ್ಲಿ ಮೊಬೈಲ್ ಬುಕ್ ಮಾಡಿದ್ದಕ್ಕೆ ಆತನಿಗೆ ಬಂದಿದ್ದು ಸೋನ್ ಪಪ್ಪಡಿ ಸ್ವೀಟ್ ಬಾಕ್ಸ್! ಮುಂಜುನಾಥ್ ಎಂಬವರಿಗೆ ಯುವತಿಯೊಬ್ಬಳು ಕರೆ ಮಾಡಿ ನಿಮಗೆ ಲಾಟರಿ ಹೊಡೆದಿದೆ. 8000 ಮೊಬೈಲ್ 1800 ರೂ. ಕೊಡುತ್ತಿದ್ದೇವೆ ಎಂದಿದ್ದಳು.
ಇದನ್ನು ನಂಬಿದ ಮುಂಜುನಾಥ್ ಮೊಬೈಲ್ ಗೆ ಆರ್ಡರ್ ಮಾಡಿದ್ದಾರೆ. ಆದರೆ ಬಂದಿದ್ದು ಸೋನ್ ಪಪ್ಪಡಿ ಮತ್ತು ಎರಡು ಚೈನು. ಇದನ್ನು ನೋಡಿ ಸಿಟ್ಟೆಗೆದ್ದ ಮಂಜುನಾಥ್ ಕರೆ ಮಾಡಿದ ಯುವತಿಗೆ ಕರೆ ಮಾಡಿ ದುಡ್ಡು ವಾಪಸ್ ಕೊಡದೇ ಇದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದರು. ಇದಾದ ಬಳಿಕ ದುಡ್ಡು ವಾಪಸ್ ಮಾಡಿದ್ದಾರೆ. ಈ ರೀತಿ ಹಲವರಿಗೆ ವಂಚನೆ ಮಾಡುವುದೇ ಈ ಜಾಲದ ಗುರಿ ಎನ್ನಲಾಗಿದೆ.