Publish Date: Tue, 22 Feb 2022 (10:10 IST)
Updated Date: Tue, 22 Feb 2022 (10:23 IST)
ಬೆಂಗಳೂರು: ಪತಿ ಮತ್ತು ಅತ್ತೆಯ ಕಿರುಕುಳದಿಂದ ಮನನೊಂದು ಪತ್ನಿ ಮಹಿಳೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
33 ವರ್ಷದ ಅನಿಶಾ ಮೃತಪಟ್ಟವರು. ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಪತಿ ನಿಜಾಮುದ್ದೀನ್ ನೀನು ಸುಂದರವಾಗಿಲ್ಲ, ಕುರೂಪಿ ಎಂದು ಸದಾ ನಿಂದಿಸುತ್ತಿದ್ದ. ಇದಕ್ಕೆ ಅತ್ತೆಯೂ ಸಾಥ್ ನೀಡುತ್ತಿದ್ದಳು.
ನೀನು ಬೇಗ ಸಾಯಿ, ನಾನು ಬೇರೆ ಮದುವೆ ಆಗ್ತೀನಿ ಎಂದು ಗಂಡ ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದ ಮಹಿಳೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಸಾವನ್ನಪ್ಪಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.