Publish Date: Tue, 22 Feb 2022 (08:40 IST)
Updated Date: Tue, 22 Feb 2022 (09:04 IST)
ವಿಜಯನಗರ: ಮೊಬೈಲ್ ಕೊಡಿಸಲಿಲ್ಲವೆಂದು ಬೇಸರಗೊಂಡ 17 ವರ್ಷದ ಅಪ್ರಾಪ್ತ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಿಯುಸಿ ಓದುತ್ತಿದ್ದ ಹುಡುಗ ಫೆಬ್ರವರಿ 16 ರಂದು ಮೊಬೈಲ್ ಕೊಡಿಸಲಿಲ್ಲವೆಂದು ಮನೆಯಿಂದ ಓಡಿಹೋಗಿದ್ದ. ಬಳಿಕ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸ್ಥಳೀಯ ಕೆರೆಯಲ್ಲಿ ಪತ್ತೆಯಾಗಿದೆ.
ಮೊಬೈಲ್ ಕೊಡಿಸದ್ದಕ್ಕೆ ಮನೆಯಲ್ಲಿ ರಂಪಾಟವಾಗಿದ್ದು ಇದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Krishnaveni K
Publish Date: Tue, 22 Feb 2022 (08:40 IST)
Updated Date: Tue, 22 Feb 2022 (09:04 IST)