Select Your Language

Notifications

webdunia
webdunia
webdunia
webdunia

ಯುವತಿಯ ಕತ್ತು ಹಿಸುಕಿ ಕೊಂದ ಸ್ನೇಹಿತೆಯ ಪತಿ

ಯುವತಿಯ ಕತ್ತು ಹಿಸುಕಿ ಕೊಂದ ಸ್ನೇಹಿತೆಯ ಪತಿ
ನವದೆಹಲಿ , ಸೋಮವಾರ, 21 ಫೆಬ್ರವರಿ 2022 (09:20 IST)
ನವದೆಹಲಿ: ಸ್ನೇಹಿತೆಯ ಪತಿಯೇ ಯುವತಿಯೊಬ್ಬಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಗೀಡಾದ ಯುವತಿ ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿ ಎನ್ನಲಾಗಿದೆ.

ಪ್ರೇಮಿಗಳ ದಿನಕ್ಕೆ ಪತ್ನಿಗೆ ಉಡುಗೊರೆ ಕೊಡಲು ಸೀರೆ ಖರೀದಿಸಬೇಕು. ನನಗೆ ಸಹಾಯ ಮಾಡು ಎಂದು ಸ್ನೇಹಿತೆಯ ಪತಿ ಕರೆ ಮಾಡಿ ಯುವತಿಯನ್ನು ಕರೆಸಿಕೊಂಡಿದ್ದ. ಆತ ಕೂಡಾ ಯುವತಿಗೆ ಸ್ನೇಹಿತನಾಗಿದ್ದ.

ಹೀಗಾಗಿ ಆತನ ಮಾತು ನಂಬಿ ಯುವತಿ ಹೋಗಿದ್ದಳು. ಆದರೆ ರಾತ್ರಿಯಾದರೂ ಮಗಳು ಬಾರದೇ ಇದ್ದಾಗ ಇಬ್ಬರ ಮೊಬೈಲ್ ಗೆ ಕರೆ ಮಾಡಿ ವಿಚಾರಿಸಲಾಯಿತು. ಆದರೆ ಇಬ್ಬರ ಮೊಬೈಲ್ ಕೂಡಾ ಸ್ವಿಚ್ ಆಫ್ ಬರುತ್ತಿತ್ತು. ಬಳಿಕ ಪೊಲೀಸರು ಮನೆಯವರಿಗೆ ಮೃತದೇಹ ಪತ್ತೆಯಾದ ಬಗ್ಗೆ ಕರೆ ಮಾಡಿ ತಿಳಿಸಿದ್ದರು. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋನು ಸೂದ್ ವಾಹನ ಜಪ್ತಿ