Publish Date: Sun, 20 Feb 2022 (11:50 IST)
Updated Date: Sun, 20 Feb 2022 (09:54 IST)
ಮುಂಬೈ: ಕುಡಿದ ಮತ್ತಿನಲ್ಲಿ ಮನುಷ್ಯನಿಗೆ ತಾನು ಏನು ಮಾಡುತ್ತೇನೆಂಬುದರ ಬಗ್ಗೆಯೇ ಅರಿವಿರುವುದಿಲ್ಲ. ಇಂತಹದ್ದೇ ಕ್ಷುಲ್ಲುಕ ಕಾರಣಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿ ಹೋಗಿದ್ದಾನೆ.
ಮದ್ಯದ ಅಂಗಡಿಯೊಂದರಲ್ಲಿ 23 ವರ್ಷ ಗ್ರಾಹಕನನ್ನು ಮತ್ತೋರ್ವ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಮದ್ಯದಂಗಡಿಯಿಂದ ಹೊರಬರುತ್ತಿದ್ದಾಗ ಕೊಲೆಗೀಡಾದ ಯುವಕ ಆರೋಪಿಯನ್ನು ತಳ್ಳಿದ್ದಾನೆ.
ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಇದೇ ಸಿಟ್ಟಿನಲ್ಲಿ ಆರೋಪಿ ಸಂತ್ರಸ್ತನ ತಲೆಗೆ ಹೊಡೆದಿದ್ದಾನೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ. ತಕ್ಷಣವೇ ಅಂಗಡಿ ಮಾಲಿಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.