Select Your Language

Notifications

webdunia
webdunia
webdunia
Wednesday, 9 April 2025
webdunia

ಅಪ್ರಾಪ್ತೆಯ ಕೊಂದ ತಾಯಿ, ಲವ್ವರ್

ಲವ್
ನವದೆಹಲಿ , ಶನಿವಾರ, 19 ಫೆಬ್ರವರಿ 2022 (11:54 IST)
ನವದೆಹಲಿ: ಮಗಳು ಅನ್ಯಜಾತಿಯವನನ್ನು ಪ್ರೀತಿಸಿದ್ದಕ್ಕೆ ತಾಯಿ ಮತ್ತು ಆಕೆಯ ಲವ್ವರ್ ಹತ್ಯೆ ಮಾಡಿದ ಘಟನೆ ನಡೆದಿದೆ.

16 ವರ್ಷದ ಪುತ್ರಿ ಅನ್ಯಜಾತಿಯವನೊಂದಿಗೆ ಪ್ರೀತಿಸುತ್ತಿದ್ದ ವಿಚಾರ ತಿಳಿದ ತಾಯಿ ಆತನಿಂದ ಬೇರೆಯಾಗುವಂತೆ ಎಚ್ಚರಿಕೆ ಕೊಟ್ಟಿದ್ದಳು. ಆದರೆ ಆಕೆ ಒಪ್ಪಲಿಲ್ಲ.

ಇದರಿಂದ ಕೆರಳಿದ ತಾಯಿ ತನ್ನ ಪ್ರೇಮಿಯ ಜೊತೆ ಸೇರಿಕೊಂಡು ಮಗಳು ಆಕೆಯ ಪ್ರೇಮಿಯನ್ನು ಭೇಟಿಯಾಗಲು ಹೋದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಏನೂ ಗೊತ್ತೇ ಇಲ್ಲದವರಂತೆ ಮನೆಗೆ ಮರಳಿದ್ದಾರೆ. ಆದರೆ ಘಟನಾ ಸ್ಥಳಕ್ಕೆ ಬಂದಿದ್ದ ಸಂತ್ರಸ್ತೆಯ ಬಾಯ್ ಫ್ರೆಂಡ್ ಆಕೆಯ ಮನೆಯವರು ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದರು ಎಂದು, ಈಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ ಎಂದು ದೂರು ನೀಡಿದ್ದ. ವಿಚಾರಣೆ ನಡೆಸಿದ ಪೊಲೀಸರಿಗೆ ಸತ್ಯ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾದಿನಿಗೆ ಅಶ್ಲೀಲ ವಿಡಿಯೋ ಕಳುಹಿಸಿದ ಬಾವ ಅರೆಸ್ಟ್