Publish Date: Mon, 21 Feb 2022 (11:45 IST)
Updated Date: Mon, 21 Feb 2022 (09:30 IST)
ನವದೆಹಲಿ: ದರೋಡೆಕೋರರಿಬ್ಬರು 55 ವರ್ಷದ ಮಹಿಳೆಯೊಬ್ಬರನ್ನು ಮಗಳೆದುರೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಮುಖ ಮುಚ್ಚಿಕೊಂಡು ಗನ್ ಮತ್ತು ಚಾಕು ಹಿಡಿದು ಮನೆಗೆ ನುಗ್ಗಿದ್ದ ಕಳ್ಳರು, ಮಗಳ ಎದುರೇ ಮಹಿಳೆಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾರೆ. ಬಳಿಕ ಮಹಿಳೆಯ ಮೈಮೇಲಿದ್ದ ಆಭರಣ, ನಗದು ದೋಚಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ತಕ್ಷಣವೇ ಸುದ್ದಿ ಮುಟ್ಟಿಸಲಾಗಿತ್ತು. ಆದರೆ ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಳು. ಮಗಳ ಹೇಳಿಕೆ ಪಡೆದಿರುವ ಪೊಲೀಸರಿಗೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಇದೀಗ ಕೊಲೆ ಹಿಂದಿನ ನಿಜವಾದ ಕಾರಣವೇನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.