Select Your Language

Notifications

webdunia
webdunia
webdunia
webdunia

ಊಟ ಬಡಿಸಲು ವಿಳಂಬವಾಗಿದ್ದಕ್ಕೆ ಮದುವೆ ಮುರಿದುಕೊಂಡ ವರನ ಮನೆಯವರು

ಊಟ ಬಡಿಸಲು ವಿಳಂಬವಾಗಿದ್ದಕ್ಕೆ ಮದುವೆ ಮುರಿದುಕೊಂಡ ವರನ ಮನೆಯವರು
ಬಿಹಾರ , ಮಂಗಳವಾರ, 22 ಫೆಬ್ರವರಿ 2022 (09:10 IST)
ಬಿಹಾರ: ಊಟ ಬಡಿಸಲು ವಿಳಂಬ ಮಾಡಿದರು ಎಂಬ ಕ್ಷುಲ್ಲುಕ ಕಾರಣಕ್ಕೆ ವರನ ಕಡೆಯವರು ಮದುವೆ ಮನೆಯಿಂದಲೇ ಮದುವೆ ಮುರಿದು ವಾಪಸಾದ ಘಟನೆ ಬಿಹಾರದಲ್ಲಿ ನಡೆದಿದೆ.

ವರನ ಕಡೆಯವರು ವಿವಾಹ ಮಂಟಪಕ್ಕೆ ಆಗಮಿಸಿದ್ದರು. ಆದರೆ ನಿಗದಿತ ಸಮಯಕ್ಕೆ ಊಟ ತಯಾರಾಗಿರಲಿಲ್ಲ. ಹೀಗಾಗಿ ವರನ ತಂದೆ ಈ ವಿಚಾರವಾಗಿ ವಧುವಿನ ಮನೆಯವರ ಜೊತೆ ತಗಾದೆ ತೆಗೆದಿದ್ದರು.

ಬಳಿಕ ಇದನ್ನೇ ಮುಂದಿಟ್ಟುಕೊಂಡು ಜಗಳವಾಡಿಕೊಂಡಿದ್ದು, ಮದುವೆ ಮನೆಯಿಂದಲೇ ಸಂಬಂಧವೇ ಬೇಡವೆಂದು ವಾಪಸಾಗಿದ್ದಾರೆ. ಜೊತೆಗೆ ವರನಿಗೆ ವರದಕ್ಷಿಣೆಯಾಗಿ ನೀಡಿದ್ದ ಬೈಕ್, ಮತ್ತಿತರ ವಸ್ತುಗಳನ್ನು ಹಿಂತಿರುಗಿಸಿದ್ದಾರೆ. ಈ ಬಗ್ಗೆ ವಧುವಿನ ಮನೆಯವರು ವರನ ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ! ಮುಂದೇನಾಯ್ತು?