Select Your Language

Notifications

webdunia
webdunia
webdunia
webdunia

ಒಡತಿಯ ಬ್ಯಾಂಕ್ ಖಾತೆಯಿಂದ 17 ಲಕ್ಷ ದೋಚಿದ ಮನೆಕೆಲಸದಾಕೆ!

ಒಡತಿಯ ಬ್ಯಾಂಕ್ ಖಾತೆಯಿಂದ 17 ಲಕ್ಷ ದೋಚಿದ ಮನೆಕೆಲಸದಾಕೆ!
ಮುಂಬೈ , ಬುಧವಾರ, 23 ಫೆಬ್ರವರಿ 2022 (09:50 IST)
ಮುಂಬೈ: ಮನೆಕೆಲಸಕ್ಕೆಂದು ಬಂದಿದ್ದ ಮಹಿಳೆ ತನ್ನ ಮನೆ ಒಡತಿಯ ಬ್ಯಾಂಕ್ ಖಾತೆಯಿಂದಲೇ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾದ ಘಟನೆ ಮುಂಬೈನಲ್ಲಿ ನಡೆದಿದೆ.

76 ವರ್ಷದ ವೃದ್ಧ ಮಹಿಳೆ ಹಣ ಕಳೆದುಕೊಂಡವರು. ಅವರ ಮನೆಗೆ ತಾತ್ಕಾಲಿಕವಾಗಿ ಕೆಲವು ದಿನಗಳ ಮಟ್ಟಿಗೆಂದು ಕೆಲಸಕ್ಕೆ ಬಂದಿದ್ದ ಮಹಿಳೆ ಈ ಕೃತ್ಯವೆಸಗಿದ್ದಾಳೆ.

ಇತ್ತೀಚೆಗೆ ಮನೆ ಒಡತಿ ತನ್ನ ಬ್ಯಾಂಕ್ ಪಾಸ್ ಬುಕ್ ಅಪ್ ಡೇಟ್ ಮಾಡಲು ಬ್ಯಾಂಕ್ ಗೆ ಹೋದಾಗ ತನ್ನ ಖಾತೆಯಿಂದ ಬರೋಬ್ಬರಿ 16.72 ಲಕ್ಷ ರೂ. ವಿತ್ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ಮನೆಕೆಲಸದಾಕೆಯ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಖಾತೆದಾರರ ಮೊಬೈಲ್ ನಂಬರ್ ಬದಲು ತನ್ನ ಮೊಬೈಲ್ ನಂಬರ್ ನೀಡಿ ಖಾತೆ ಅಪ್ ಡೇಟ್ ಮಾಡಿದ್ದಳು. ಇದರಿಂದಾಗಿ ಆಕೆಗೆ ಹಣ ದೋಚುವುದು ಸುಲಭವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ