Publish Date: Mon, 24 Oct 2022 (16:40 IST)
Updated Date: Mon, 24 Oct 2022 (17:08 IST)
ಪಟಾಕಿ ಹಚ್ಚಲು ಹೋಗಿ ಬಲಗಣ್ಣಿಗೆ ಬಾಲಕ ಗಾಯ ಮಾಡಿಕೊಂಡಿದ್ದಾನೆ.ಆಟಂಬಾಂಬ್ ಹಚ್ಚುವಾಗ ಬಲಗಣ್ಣಿಗೆ ಸಿಡಿದು
ಗಾಯವಾಗಿದೆ.ಫ್ರೆಜರ್ ಟೌನ್ ನಿವಾಸಿಯಾಗಿರೋ 7 ವರ್ಷದ ಬಾಲಕ ಆದಿತ್ಯ ಎಂಬುದು ತಿಳಿದಿದೆ.ಮಧ್ಯರಾತ್ರಿ ಒಂದು ಗಂಟೆಯಲ್ಲಿ ಅವಘಡ ನಡೆದಿದೆ.ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಾಗಿರೋ ಬಾಲಕನಿಗೆ ಮಿಂಟೋ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಈ ವೇಳೆ ಮಾತನಾಡಿದ ಮಿಂಟೋ ಕಣ್ಣಿನ ಅಸ್ಪತ್ರೆಯ ಡಾ ವಿದ್ಯಾ ನಿನ್ನೆ ಯಿಂದ ಪಟಾಕಿ ಅವಘಡಕ್ಕೆ ನಾಲ್ವರು ಚಿಕಿತ್ಸೆ ಪಡೆದಿದರೆ.ಮೂವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.ಹತ್ತು ವರ್ಷದ ಬಾಲಕನಿಗೆ ರಾಕೇಟ್ ನಿಂದ ಮುಖ ಪೂರ್ತಿ ಸುಟ್ಟು ಹೋಗಿದೆ.ಬಾಲಕನಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.ನಗರದಲ್ಲಿ ನಾಲ್ಕಕ್ಕೆ ಪಟಾಕಿ ಅವಘಡ ಸಂಖ್ಯೆ ಏರಿದೆ.ಥಣಿಸಂದ್ರದ ೭ ವರ್ಷದ ಬಾಲಕನ ಎಡಗಣ್ಣಿಗೆ ಹಾನಿಯಾಗಿದೆ.ಫ್ರೆಜರ್ ಟೌನ್ ನ ೭ ವರ್ಷದ ಬಾಲಕನ ಬಲಗಣ್ಣಿಗೆ ಹಾನಿಯಾಗಿದೆ.ಸದ್ಯ ಬಾಲಕರ ಕಣ್ಣಿಗೆ ಯಾವುದೇ ತೊಂದರೆ ಇಲ್ಲ ಅಂತಾ ಪ್ರತಿಕ್ರಿಯಿಸಿದ್ದಾರೆ.