Publish Date: Mon, 24 Oct 2022 (13:30 IST)
Updated Date: Mon, 24 Oct 2022 (13:35 IST)
ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳು ಜನರನ್ನು ಸೆಳೆಯುತ್ತಿರುತ್ತವೆ. ವಿಭಿನ್ನ ಪ್ರಯತ್ನಗಳನ್ನು ಮಾಡಿ ಜನರು ಲೈಕ್, ಕಮೆಂಟ್ಗಳನ್ನು ಗಿಟ್ಟಿಸಿಕೊಳ್ತಾರೆ. ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ನೋಟನ್ನು ಬಳಸಿ ಹಾರವನ್ನು ತಯಾರು ಮಾಡಿದ್ದಾನೆ. ಮಲ್ಲಿಗೆ, ಸೇವಂತಿಗೆ, ಸುಗಂಧಿ, ಚಂಡುಹೂ, ಕನಕಾಂಬರ, ಗುಲಾಬಿ ಹೀಗೆ ಹೂಗಳಲ್ಲಿ ಹಾರ ಮಾಡಿ ಮದುಮಕ್ಕಳನ್ನು ಅಲಂಕರಿಸುವುದುಂಟು. ಆದರೆ ಇಲ್ಲಿ ವಿಭಿನ್ನವಾಗಿ ಹಾರವನ್ನು ತಯಾರು ಮಾಡಲಾಗಿದೆ.
ಈ ವೈರಲ್ ಆದ ವಿಡಿಯೋದಲ್ಲಿ ನೋಟಿನಿಂದ ಹಾರವನ್ನು ಮಧುಮಗ ಧರಿಸಿದ್ದಾನೆ. ಅವನ ಸ್ನೇಹಿತರು ಅಕ್ಕಪಕ್ಕ ನಿಂತು ಆ ಹಾರವನ್ನು ಪ್ರದರ್ಶಿಸುತ್ತಿದ್ದಾರೆ. ದೊಡ್ಡ ಬೆಡ್ಶೀಟಿನಂತೆ ಕಾಣುತ್ತಿರುವ ಈ ಹಾರ ನೆಲದ ಮೇಲೆಲ್ಲ ಹರಡಿಕೊಂಡಿದೆ.
ಇದನ್ನ ಕಂಡ ನೆಟ್ಟಿಗರಂತೂ ಹೌಹಾರಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 3.5 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ.