Select Your Language

Notifications

webdunia
webdunia
webdunia
webdunia

ರಾಜ್ಯದ ಜನರ ಸಹಕಾರದಿಂದಾಗಿ ಭಾರತ್ ಜೋಡೊ ಯಾತ್ರೆ ಮುಕ್ತಾಯ- ಡಿಕೆಶಿ

ರಾಜ್ಯದ ಜನರ ಸಹಕಾರದಿಂದಾಗಿ ಭಾರತ್ ಜೋಡೊ ಯಾತ್ರೆ ಮುಕ್ತಾಯ- ಡಿಕೆಶಿ
bangalore , ಮಂಗಳವಾರ, 25 ಅಕ್ಟೋಬರ್ 2022 (15:15 IST)
ರಾಜ್ಯದ ಜನರ ಸಹಕಾರದಿಂದ ಕರ್ನಾಟಕಲ್ಲಿ ಭಾರತ ಜೋಡೊ ಯಾತ್ರೆ ಮುಕ್ತಾಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.ರಾಹುಲ್ ಗಾಂಧಿ ಅವರ ನಡಿಗೆ ಜನ ಸಾಮಾನ್ಯರ ಕಡೆಗೆ ಆಗಿತ್ತು.ಪಾದಯಾತ್ರೆಯಲ್ಲಿ ಕಿವಿ ಕೇಳಲಿಲ್ಲ.ಆದ್ರೆ ಕ್ಯಾಮರಾದಲ್ಲಿ ಎಲ್ಲಾ ಸೇರೆಯಾಗಿದೆ.ರಾಜಕಾರಣವನ್ನು ಹೊಸ ದಿಕ್ಕಿನ ಕಡೆಗೆ ತಗೆದುಕೊಂಡು ಹೋಗಿದೆ ಈ ಭಾರತ ಜೋಡೋ ಯಾತ್ರೆ.ಈ ಯಾತ್ರೆಯಲ್ಲಿ ಮಹಿಳೆಯರ ಸಾಗರ,ಮಕ್ಕಳ ಸಾಗರವು ಇತ್ತು.ಈ ಹಿಂದೆ ಇಂದಿರಾ ಗಾಂಧಿ ನೋಡಲು ಜನರು ಬರ್ತಿದ್ರು.ಅದೇ ರೀತಿ ಇವತ್ತು ರಾಹುಲ್ ಗಾಂಧಿಯನ್ನು ನೋಡಲು ಕುಟುಂಬ ಸಮೇತ ಬಂದಿದ್ರು.ಸಾವಿರಾರು ಮಕ್ಕಳ ಜೋತೆ ರಾಹುಲ್ ಗಾಂಧಿ‌ ಮಾತಾಡಿದ್ದಾರೆ.ಇದಕ್ಕೆ ನಾನೇ ಸಾಕ್ಷಿ.ಏಕೆಂದರೆ ನಾನು ರಾಹುಲ್ ಗಾಂಧಿ ಪಕ್ಕದೆಲ್ಲೆ ನಡೆಯುತ್ತಿದ್ದೆ.ಮಕ್ಕಳ ಜೋತೆ ರಾಹುಲ್ ಮಾತಾಡ್ತಿದ್ರು.ಬೆಳಗ್ಗೆ 5:30 ಗಂಟೆಗೆ ರಾಹುಲ್ ಎದ್ದೆಳುತಿದ್ರು.6:30 ಕ್ಕೆ ಪಾದಯಾತ್ರೆ ಪ್ರಾರಂಭ ಆಗ್ತಿತ್ತು.ರಾಹುಲ್ ಗಾಂಧಿ ಅವರ ಸ್ವಲ್ಪ ಸ್ಪೀಡ್ ಜಾಸ್ತಿ ಇತ್ತು.ನಾನು ಅವರಿಗೆ  ಸ್ವಲ್ಪ ನಿಧಾನವಾಗಿ ನಡೆಯಿರಿ ಎಂದು ಹೇಳ್ತಿದೆ.ಏಕೆಂದರೆ ಅವರ ಜೊತೆ ಕೆಲವರಿಗೆ ನಡೆಯೊಕ್ಕೆ ಆಗೊಲ್ಲ ಅಂತಾ.ಆಮೇಲೆ ನಾವೇ ಅವರ ಸ್ಪೀಡ್ ಗೆ ಅಡ್ಜೆಸ್ಟ್ ಆಗಿದ್ವಿ.ಬೆಳಗ್ಗೆ ಜನ ಬರೊಲ್ಲ.ಸ್ವಲ್ಪ ಲೇಟ್ ಆಗಿ ಪಾದಯಾತ್ರೆ ಮಾಡೊಣ ಅಂತಿದ್ವಿ.ಆದ್ರೆ ರಾಹುಲ್ ಗಾಂಧಿ ಇದಕ್ಕೆ ಒಪ್ಪಲಿಲ್ಲ ಎಂದು ಡಿಕೆಶಿ ರಾಹುಲ್ ಗಾಂಧಿಯನ್ನ ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾಗಿಂಗ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಸಾವು