Publish Date: Wed, 12 Oct 2022 (07:15 IST)
Updated Date: Wed, 12 Oct 2022 (07:18 IST)
ಮಂಡ್ಯ : ಟ್ಯೂಶನ್ಗೆ ಹೋದ ಬಾಲಕಿ ನೀರಿನ ಸಂಪ್ನಲ್ಲಿ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಜರುಗಿದೆ.
ಮಳವಳ್ಳಿ ಪಟ್ಟಣದ ಎನ್ಇಎಸ್ ಬಡಾವಣೆಯ ಅಶ್ವಿನಿ ಮತ್ತು ಸುರೇಶ್ ಕುಮಾರ್ ದಂಪತಿಯ ಪುತ್ರಿ ದಿವ್ಯಾ(10) ಶವವಾಗಿ ಪತ್ತೆಯಾಗಿರುವ ಬಾಲಕಿಯಾಗಿದ್ದಾಳೆ.
ಇಂದು ಬೆಳಗ್ಗೆ 11 ಗಂಟೆಗೆ ಟ್ಯೂಶನ್ಗೆ ಎಂದು ಮನೆಯಿಂದ ಹೋದ ಬಾಲಕಿ ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಟ್ಯೂಶನ್ ಸೆಂಟರ್ ಸೇರಿದಂತೆ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಬಾಲಕಿ ಪತ್ತೆಯಾಗಿಲ್ಲ. ಇದಾದ ಬಳಿಕ ಪೋಷಕರು ಎಲ್ಲಾ ಕಡೆ ತಮ್ಮ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇಷ್ಟಾದರೂ ಸಹ ದಿವ್ಯಾ ಮಾತ್ರ ಪತ್ತೆಯಾಗಿಲ್ಲ.
ಇದಾದ ನಂತರ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಎಂಬವರ ನಿರ್ಮಾಣ ಹಂತದ ಮನೆಯ ಕಟ್ಟಡದ ಸಮೀಪದಲ್ಲಿದ್ದ ನೀರಿನ ಸಂಪ್ನಲ್ಲಿ ಪರಿಶೀಲನೆ ನಡೆಸಿದಾಗ ಬಾಲಕಿಯ ಶವ ಪತ್ತೆಯಾಗಿದೆ.