Select Your Language

Notifications

webdunia
webdunia
webdunia
webdunia

ಬುರ್ಖಾ ಧರಿಸಿಲ್ಲ ಎಂದು ಪತ್ನಿಯನ್ನೇ ಚಾಕುವಿನಿಂದ ಇರಿದ ಪತಿ!

ಬುರ್ಖಾ ಧರಿಸಿಲ್ಲ ಎಂದು ಪತ್ನಿಯನ್ನೇ ಚಾಕುವಿನಿಂದ ಇರಿದ ಪತಿ!
ಮುಂಬೈ , ಬುಧವಾರ, 28 ಸೆಪ್ಟಂಬರ್ 2022 (12:41 IST)
ಮುಂಬೈ : ಬುರ್ಖಾ  ಧರಿಸಿ ಮುಸ್ಲಿಂ ಸಂಪ್ರದಾಯ ಪಾಲನೆ ಮಾಡದೇ ಇದ್ದುದ್ದಕ್ಕಾಗಿ ಪತ್ನಿಯನ್ನ ಅನೇಕ ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟ್ಯಾಕ್ಸಿ ಡ್ರೈವರ್ ಇಕ್ಬಾಲ್ ಶೇಕ್ (36)ನನ್ನು ಬಂಧಿಸಲಾಗಿದೆ. ತನ್ನ ಪತ್ನಿ ಮುಸ್ಲಿಂ ಸಂಪ್ರದಾಯ ಅನುಸರಿಸಲು ನಿರಾಕರಿಸಿದ್ದರಿಂದ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂ ಮಹಿಳೆ ರೂಪಾಲಿ 2019ರಲ್ಲಿ ಮುಸ್ಲಿಂ ಸಮುದಾಯದ ಇಕ್ಬಾಲ್ ಶೇಖ್ನನ್ನು ವಿವಾಹವಾದರು. ತಮ್ಮ ಹೆಸರನ್ನು ಜಾರಾ ಎಂದೂ ಬದಲಾಯಿಸಿಕೊಂಡಿದ್ದರು.

ದಂಪತಿಗಳಿಗೆ 2020ರಲ್ಲಿ ಒಂದು ಮಗು ಜನಿಸಿತ್ತು. ಕಳೆದ ಕೆಲವು ತಿಂಗಳಿನಿಂದ ಇಕ್ಬಾಲ್ ಶೇಖ್ ಕುಟುಂಬಸ್ಥರು ಬುರ್ಖಾ ಧರಿಸುವಂತೆ ರೂಪಾಲಿಗೆ ಒತ್ತಡ ಹೇರುತ್ತಿದ್ದರಿಂದ ಆಕೆ ತನ್ನ ಮಗನೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿ ವಿಲಾಸ್ ರಾಥೋಡ್ ಮಾಹಿತಿ ನೀಡಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ವದಂತಿಯ ಬೆನ್ನಲ್ಲೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಚೀನಾ ಅಧ್ಯಕ್ಷ