Select Your Language

Notifications

webdunia
webdunia
webdunia
webdunia

ಮೊಹರಂ ವೇಳೆ ಚಾಕು ಇರಿತ

ಮೊಹರಂ ವೇಳೆ ಚಾಕು ಇರಿತ
ಗದಗ , ಬುಧವಾರ, 10 ಆಗಸ್ಟ್ 2022 (21:36 IST)
ದಾದಾಪೀರ್ ಹೊಸಮನಿ 23, ಮುಸ್ತಾಕ್ ಹೊಸಮನಿ 24 ಎಂಬುವರಿಗೆ ಚಾಕೂ ಇರಿಯಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಇನ್ನೊಬ್ಬರಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋಹರಂ ಹಬ್ಬ ಆಚರಣೆ ವೇಳೆ ಕಾಲು ತುಳಿದಿದ್ದಕ್ಕೆ ಗುಂಪಿನಿಂದ ಚಾಕೂ ಇರಿಯಲಾಗಿದೆ ಎಂದು ಆರೋಪಿಸಲಾಗಿದೆ. ಚಾಕುವಿನಿಂದ ಇರಿದ ಹಿಂದೂ ಸಂಘಟನೆ ಯುವಕ ಸೋಮೇಶ್ ಗುಡಿ ಎಂಬುವರ ಮನೆಗೆ ಮುಸ್ಲಿಂ ಜನಾಂಗದವರು ನುಗ್ಗಿ ದಾಂಧಲೆ ಮಾಡಿದ್ದಾರೆ. ಮನೆಯ ಕಿಟಕಿ, ಬಾಗಿಲು ಧ್ವಂಸ ಮಾಡಿ ಸೋಮೇಶ್ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ. ಮಲ್ಲಸಮುದ್ರ ಗ್ರಾಮದ ಮುಸ್ಲಿಂ ಸಮಾಜದ ನೂರಾರು ಯುವಕರು, ಮಹಿಳೆಯರು ಒಟ್ಟಾಗಿ ನುಗ್ಗಿ ಈ ಗಲಾಟೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತ ಸೋಮೇಶ್ ಬಂಧಿಸಲಾಗಿದೆ. ಆದ್ರೂ ಮುಸ್ಲಿಂ ಜನಾಂಗದವರು ಹೀಗೆ ಗಲಾಟೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸದ್ಯಕ್ಕೆ ಗ್ರಾಮದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಆದ್ರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾಲಂಕಾರದಿಂದ ಕಂಗೊಳಿಸ್ತಿದೆ ಹಂಪಿ