Publish Date: Wed, 10 Aug 2022 (21:00 IST)
Updated Date: Wed, 10 Aug 2022 (21:05 IST)
ಹಳ್ಳಕ್ಕೆ ಬಿದ್ದು 12 ವರ್ಷದ ಸಂಧ್ಯಾಶ್ರೀ ಎಂಬ ಬಾಲಕಿ ಮೃತಪಟ್ಟ ಘಟನೆ ಮಂಡ್ಯ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ. ನಿನ್ನೆ ಮೊಹರಂ ಇದ್ದ ಕಾರಣ ಶಾಲೆಗೆ ರಜೆ ನೀಡಲಾಗಿತ್ತು. ಮಳೆಯ ಕಾರಣ ಹೆಚ್ಚಿನ ನೀರು ಹಳ್ಳದಲ್ಲಿ ತುಂಬಿ ಹರಿಯುತ್ತಿತ್ತು. ಹಳ್ಳ ತುಂಬಿದ್ದನ್ನು ವೀಕ್ಷಿಸಲು ತೆರಳಿದ್ದ ಬಾಲಕಿ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ. ಈ ಸಂಬಂಧ ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.