Select Your Language

Notifications

webdunia
webdunia
webdunia
webdunia

ಕಾಫಿನಾಡಲ್ಲಿ ನಿಲ್ಲದ ವರುಣಾರ್ಭಟ

Non-stop Varunarbhata in Kafinada
chikamangaluru , ಬುಧವಾರ, 10 ಆಗಸ್ಟ್ 2022 (20:37 IST)
ಮೂಡಿಗೆರೆ ತಾಲೂಕಿನಾದ್ಯಂತ ಭಾರಿ ಗಾಳಿ, ಮಳೆಗೆ ಜನರ ಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅವಾಂತರದಿಂದ ಹಲವು ಗ್ರಾಮಗಳಲ್ಲಿ ಮನೆ ಮೇಲೆ ಮರ ಬಿದ್ದು ಜನರು ಆತಂಕಕ್ಕೊಳಗಾಗಿದ್ದಾರೆ. ಮಳೆಗೆ ಮನೆಗಳ ಗೋಡೆಗಳು ಕುಸಿದಿದೆ. ಗಬಗಲ್, ಕೂವೆ, ಕೊಟ್ಟಿಗೆಹಾರ, ಬಣಕಲ್, ಕೋಳೂರು, ಬೆಟ್ಟಗೆರೆ ಗ್ರಾಮಗಳಲ್ಲಿ ಹೆಚ್ಚು ಮಳೆಯಾದ ಹಿನ್ನೆಲೆ ಗುಡ್ಡ ಕುಸಿದಿದ್ದು, ಕೊಟ್ಟಿಗೆಹಾರ-ಬಣಕಲ್ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಕಡಿತಗೊಂಡಿದೆ. ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.  ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮದ ಜನರು ಪರದಾಡುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾ ಮಳೆಗೆ ಶಿವಮೊಗ್ಗ ಜನ ತತ್ತರ