Select Your Language

Notifications

webdunia
webdunia
webdunia
webdunia

ಒಂದೇ ಗ್ರಾಮದಲ್ಲಿ ಎರಡು ಮನೆ ಕುಸಿತ

Two houses collapsed in the same village
ಹಾಸನ , ಬುಧವಾರ, 10 ಆಗಸ್ಟ್ 2022 (20:27 IST)
ಒಂದೇ ಗ್ರಾಮದಲ್ಲಿ ಎರಡು ಮನೆ ಕುಸಿದ ಘಟನೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೆಲಗಳಲೆ ಗ್ರಾಮದಲ್ಲಿ ನಡೆದಿದೆ.  ಮೇಲ್ಚಾವಣಿ ಸಮೇತ ಮನೆ ಗೋಡೆ ಕುಸಿದು ಎರಡು ಕುಟುಂಬಗಳು ಬೀದಿಪಾಲಾಗಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಶೀತ ಹೆಚ್ಚಾಗಿ, ಗ್ರಾಮದ ಅಪ್ಪಣ್ಣಗೌಡ ಹಾಗು ತಂಗ್ಯಮ್ಮ ಎಂಬುವವರಿಗೆ ಸೇರಿದ ಮನೆಗಳು ಕುಸಿದಿದ್ದು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ಧವಸ ಧಾನ್ಯಗಳು ನಾಶವಾಗಿದೆ. ಮನೆ ಕುಸಿದು ಬೀಳೋ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯಿಂದಾಗಿ ಎರಡು ಕುಟುಂಬಗಳು ಕಂಗೆಟ್ಟಿದ್ದು, ಸೂಕ್ತ ಪರಿಹಾರವನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮೇಲೆ ಮರ ಬಿದ್ದು ತಾಯಿ-ಮಗಳು ಸಾವು