Publish Date: Tue, 29 Nov 2022 (17:11 IST)
Updated Date: Tue, 29 Nov 2022 (17:14 IST)
ರೌಡಿಶೀಟರ್ ಫೈಟರ್ ರವಿ ಬಿಜೆಪಿ ಸೇರ್ಪಡೆ ವಿಚಾರ. ನನಗೆ ಫೈಟರ್ ರವಿನೂ ಗೊತ್ತಿಲ್ಲ, ಆ್ಯಕ್ಟರ್ ರವಿನೂ ಗೊತ್ತಿಲ್ಲ ಅಂತಾ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಸೈಲೆಂಟ್ ಸುನೀಲನ ಜತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡ ಪ್ರಕರಣ. ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ನಾನು ಸಹ ಆ ರಕ್ತದಾನ ಶಿಬಿರಕ್ಕೆ ಹೋಗಿದ್ದೆ. ನಾನು ಹೋಗಿದ್ದಾಗ ಅಲ್ಲಿ ಯಾರೂ ಇರಲಿಲ್ಲ. ನಾನು ಯಾರ ಜತೆಗೂ ವೇದಿಕೆ ಹಂಚಿಕೊಂಡಿಲ್ಲ. ರಕ್ತದಾನ ಪವಿತ್ರ ಕಾರ್ಯ, ಅಂಥ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿಗೆ ಯಾರು ಬಂದಿದ್ರು, ಯಾರು ಬಂದಿಲ್ಲ ಅಂತ ನಾನು ನೋಡಿಲ್ಲ. ಸಹಜವಾಗಿ ಕೆಲವರು ಬಂದು ನಮ್ಮ ಜತೆ ಫೊಟೋ ತೆಗೆಸಿಕೊಳ್ತಾರೆ ಅವರ್ಯಾರು, ಹಿನ್ನೆಲೆ ಏನು ಅಂತ ನೋಡಕ್ಕಾಗುತ್ತಾ. ಪಕ್ಷಕ್ಕೆ ಒಂದು ತತ್ವ, ಸಿದ್ಧಾಂತ ಇದೆ. ಕ್ರಿಮಿನಲ್ ಹಿನ್ನೆಲೆ ಇರುವವರನ್ನು ನಾವು ಸೇರಿಸಿಕೊಳ್ಳಲ್ಲ ಎಂದು ಸ್ಪಷ್ಟನೆ ನೀಡಿದ ಡಾ.ಕೆ.ಸುಧಾಕರ್.