Select Your Language

Notifications

webdunia
webdunia
webdunia
webdunia

ಚಂದನ್-ನಿವೇದಿತಾ ಪ್ರಪೋಸ್ ವಿಷಯಕ್ಕೆ ಸಂಸದ ಪ್ರತಾಪ್ ಸಿಂಹ ಮೇಲೆ ಟೀಕೆ

ಚಂದನ್-ನಿವೇದಿತಾ ಪ್ರಪೋಸ್ ವಿಷಯಕ್ಕೆ ಸಂಸದ ಪ್ರತಾಪ್ ಸಿಂಹ ಮೇಲೆ ಟೀಕೆ
ಮೈಸೂರು , ಸೋಮವಾರ, 7 ಅಕ್ಟೋಬರ್ 2019 (09:36 IST)
ಮೈಸೂರು: ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡಗೆ ಲವ್ ಪ್ರಪೋಸ್  ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಇದೀಗ ಸಂಸದ ಪ್ರತಾಪ್ ಸಿಂಹ ಮೇಲೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.


ಚಂದನ್ ದಸರಾ ವೇದಿಕೆಯಲ್ಲಿ ಕಾರ್ಯಕ್ರಮದ ನಡುವೆಯೇ ಲವ್ ಪ್ರಪೋಸ್ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು. ಇವರಿಗೆ ದಸರಾ ವೇದಿಕೆಯಲ್ಲಿ ಲವ್ ಪ್ರಪೋಸ್ ಮಾಡಲು ಅವಕಾಶ ಕೊಟ್ಟಿದ್ದೇಕೆ ಎಂದು ಹಲವರು ಟೀಕಿಸುತ್ತಿದ್ದಾರೆ. ಕೆಲವರು ನೇರವಾಗಿ ಸಂಸದ ಪ್ರತಾಪ್ ಸಿಂಹಗೇ ಪ್ರಶ್ನೆ ಮಾಡುತ್ತಿದ್ದಾರೆ.

ನಾಡಹಬ್ಬದಲ್ಲಿ ನಮ್ಮ ಸಂಸ್ಕೃತಿಯ ಬಿಂಬಿಸುವ ಕಾರ್ಯಕ್ರಮಗಳಿರಬೇಕು. ಅದರ ಬದಲು ಪರಭಾಷೆಯವರನ್ನೆಲ್ಲಾ ಕರೆದು ಸನ್ಮಾನಿಸುತ್ತೀರಿ. ಇದೂ ಸಾಲದ್ದಕ್ಕೆ ಲವ್ ಪ್ರಪೋಸ್ ಮಾಡಲೂ ಅವಕಾಶ ಕೊಡುತ್ತಿದ್ದೀರಿ. ಎಲ್ಲಿಗೆ ತಲುಪಿದೆ ನಮ್ಮ ದಸರಾ ಕಾರ್ಯಕ್ರಮ ಎಂದು ಹಲವರು ಸಂಸದರನ್ನು ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸಿಗರನ್ನು ಆಕರ್ಷಿಸಲು ಕಟ್ಟುನಿಟ್ಟಿನ ನಿಯಮವೊಂದನ್ನು ಸಡಿಲಿಸಿದ ಸೌದಿ ಅರೇಬಿಯಾ