Publish Date: Sun, 06 Oct 2019 (05:42 IST)
Updated Date: Sun, 06 Oct 2019 (05:44 IST)
ಬೆಂಗಳೂರು: ಬಿಗ್ ಬಾಸ್ ಖ್ಯಾತಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕಾರ್ಯಕ್ರಮವೊಂದರ ವೇದಿಕೆ ಮೇಲೆ ತಮ್ಮ ಬಹುಕಾಲದ ಪ್ರೀತಿಯನ್ನು ಬಹಿರಂಗಪಡಿಸಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾಗಿದೆ.
ನಿವೇದಿತಾ ಮತ್ತು ಚಂದನ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಿಗ್ ಬಾಸ್ ನಿಂದ ಹೊರಬಂದ ಮೇಲೆಯೂ ಗಾಸಿಪ್ ಹರಡಿತ್ತು. ಆದರೆ ಇಬ್ಬರೂ ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಇದೀಗ ಚಂದನ್ ಕಾರ್ಯಕ್ರಮವೊಂದರ ವೇದಿಕೆ ಮೇಲೆ ಪ್ರಪೋಸ್ ಮಾಡಿರುವುದು ನೆಟ್ಟಿಗರ ಟ್ರೋಲ್ ಗೆ ಆಹಾರವಾಗಿದೆ.
ವರ್ಷಗಳ ಹಿಂದೆ ನಿವೇದಿತಾ ಸಂದರ್ಶನವೊಂದರಲ್ಲಿ ನಾವು ಮದುವೆಯಾಗೋದಾ? ನಾವಿಬ್ಬರೂ ಜಸ್ಟ್ ಗುಡ್ ಫ್ರೆಂಡ್ಸ್ ಅಷ್ಟೇ ಎಂದಿದ್ದ ವಿಡಿಯೋವನ್ನು ಹಾಕಿ ಟ್ರೋಲಿಗರು ತಮಾಷೆ ಮಾಡುತ್ತಿದ್ದಾರೆ. ಅಲ್ಲದೆ, ಇನ್ನು ಕೆಲವರು ನಿವೇದಿತಾ ಇನ್ನೂ ಮಗುವಿನ ಥರಾ ಆಡ್ತಿದ್ದಾಳೆ. ಅವಳನ್ನು ಚಂದನ್ ಮದುವೆಯಾಗೋದಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಅಂತೂ ಇವರಿಬ್ಬರ ಲವ್ ಮ್ಯಾಟರ್ ಈಗ ಸುದ್ದಿಯಾಗಿರುವುದಂತೂ ನಿಜ.