ವೇದಿಕೆಯಲ್ಲೇ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ!

ಶನಿವಾರ, 5 ಅಕ್ಟೋಬರ್ 2019 (09:36 IST)
ಬೆಂಗಳೂರು: ಬಿಗ್ ಬಾಸ್ ಮೂಲಕ ಜನಪ್ರಿಯರಾದ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ನಡುವೆ ಪ್ರೀತಿಯಿದೆ ಎಂದು ಹಲವು ದಿನಗಳಿಂದ ಸುದ್ದಿ ಓಡಾಡುತ್ತಲೇ ಇತ್ತು. ಆದರೆ ಇಬ್ಬರೂ ಇದನ್ನು ನಿರಾಕರಿಸಲೂ ಇಲ್ಲ ಒಪ್ಪಿಕೊಂಡಿರಲೂ ಇಲ್ಲ.


ಆದರೆ ಈಗ ಚಂದನ್ ಶೆಟ್ಟಿ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಲೈವ್ ಆಗಿ ಪ್ರಪೋಸ್ ಮಾಡಿದ್ದಲ್ಲದೆ, ಕೈಗೆ ಉಂಗುರು ತೊಡಿಸಿ ಬಹಿರಂಗವಾಗಿಯೇ ತಮ್ಮಿಬ್ಬರು ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ.

ನಿವೇದಿತಾಗೆ ವೇದಿಕೆಯಲ್ಲೇ ಐ ಲವ್ ಯೂ ಹೇಳಿ ಚಂದನ್ ಉಂಗುರ ತೊಡಿಸಿದ್ದಾರೆ. ಚಂದನ್ ಪ್ರಪೋಸ್ ಮಾಡಿದ ರೀತಿಗೆ ನಿವೇದಿತಾ ಕೂಡಾ ಭಾವುಕರಾಗಿದ್ದಾರೆ. ಬಳಿಕ ಮಾತನಾಡಿದ ಚಂದನ್ ‘ಹೀಗೆ ಎಲ್ಲರ ಮುಂದೆ ನಾನು ಪ್ರಪೋಸ್ ಮಾಡ್ತೀನಿ ಅಂತ ಅಂದುಕೊಂಡಿರಲೇ ಇಲ್ಲ. ಸದ್ಯದಲ್ಲೇ ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾವು ಮದುವೆಯಾಗ್ತೇವೆ ಎಂದು ಚಂದನ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಯುಷ್ಮಾನ್ ಭವ ಮೊದಲ ಹಾಡು ಇಂದು ಬಿಡುಗಡೆ