Select Your Language

Notifications

webdunia
webdunia
webdunia
webdunia

ಶ್ರೀಲಂಕಾ ಗಾಯಕಿ ಬಾಯಲ್ಲಿ ಕೆಜಿಎಫ್ ಕನ್ನಡ ಹಾಡು! ನೆಟ್ಟಿಗರು ಫಿದಾ

ಶ್ರೀಲಂಕಾ ಗಾಯಕಿ ಬಾಯಲ್ಲಿ ಕೆಜಿಎಫ್ ಕನ್ನಡ ಹಾಡು! ನೆಟ್ಟಿಗರು ಫಿದಾ
ಬೆಂಗಳೂರು , ಬುಧವಾರ, 2 ಅಕ್ಟೋಬರ್ 2019 (07:42 IST)
ಬೆಂಗಳೂರು: ಕೆಜಿಎಫ್ ಚಿತ್ರದ ಗರ್ಭದಿ ನನ್ನಿರಿಸಿ ಹಾಡನ್ನು ಶ್ರೀಲಂಕಾ ಗಾಯಕಿ ಹಾಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.


ಶ್ರೀಲಂಕಾ ಮೂಲದ ಹನ್ಸಿನಿ ವಿಮಲ್ಸಿರಿ ಕೆಜಿಎಫ್ ನ ಕನ್ನಡ ಹಾಡನ್ನು ಹಾಡಿ ಯೂ ಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ್ದರು. ಉಚ್ಚಾರಣೆಯಲ್ಲಿ ಎಲ್ಲೂ ಲೋಪವಾಗದಂತೆ ಪಕ್ಕಾ ಕನ್ನಡತಿಯಂತೆ ಹಾಡಿರುವ ಈಕೆಯ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಕನ್ನಡ ಬಾರದೇ ಇದ್ದರೂ ಸ್ಪಷ್ಟವಾಗಿ ಕನ್ನಡ ಉಚ್ಚಾರಣೆ ಮಾಡಿರುವ ಈಕೆಗೆ ಸಾಮಾಜಿಕ ಜಾಲತಾಣಗಳ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಮೂಲದವರೇ ಕನ್ನಡ ಮಾತನಾಡಲು ಹಿಂಜರಿಯುವಾಗ ವಿದೇಶಿ ಗಾಯಕಿಯೊಬ್ಬಳು ಇಷ್ಟು ಅದ್ಭುತವಾಗಿ ಹಾಡಿದ್ದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಂಗನಾಯಕಿಯ ಲಿರಿಕಲ್ ವಿಡಿಯೋ ಮಾಡಿದ ಮೋಡಿ!