Publish Date: Thu, 07 Oct 2021 (09:35 IST)
Updated Date: Thu, 07 Oct 2021 (09:39 IST)
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬೀದಿ ನಾಯಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುವವರಿಗೇನೂ ಕಮ್ಮಿಯಿಲ್ಲ. ಆದರೆ ಈ ರೀತಿ ಶ್ವಾನ ಪ್ರೀತಿಯಿಂದಾಗಿ ಅಕ್ಕಪಕ್ಕದ ಮನೆಯ ನಿವಾಸಿಗಳು ಪೊಲೀಸ್ ಠಾಣೇ ಮೆಟ್ಟಿಲೇರಿದ ಘಟನೆ ಮಲ್ಲೇಶ್ವರಲ್ಲಿ ನಡೆದಿದೆ.
ಅಪಾರ್ಟ್ ಮೆಂಟ್ ನಿವಾಸಿಗಳಾದ ಮೃದುಲಾ ಮತ್ತು ಪತಿ ಪ್ರಭಾಕರ್ ವಿರುದ್ಧ ಅನುರಾಧ ಮತ್ತು ಶ್ರೀನಿವಾಸ್ ಎಂಬ ದಂಪತಿ ದೂರು ನೀಡಿದ್ದರು. ಬೀದಿ ನಾಯಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು.
ಆದರೆ ಇದಕ್ಕೆ ಪ್ರತಿಯಾಗಿ ಮೃದುಲಾ ದಂಪತಿ ಅನುರಾಧ ದಂಪತಿ ವಿರುದ್ಧ ದೂರು ನೀಡಿದ್ದು, ಬೀದಿ ನಾಯಿಗೆ ಆಹಾರ ಹಾಕಿ ಪೋಷಣೆ ಮಾಡುವುದರಿಂದ ತೊಂದರೆಯಾಗುತ್ತಿದೆ. ಅವುಗಳು ನಮ್ಮ ಕುಟುಂಬಸ್ಥರಿಗೆ ಕಚ್ಚಲು ಬಂದಿತ್ತು ಎಂದು ಪ್ರತಿದೂರು ನೀಡಿದ್ದಾರೆ. ಇದೀಗ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ಇತ್ಯರ್ಥಕ್ಕೆ ಪ್ರಯತ್ನ ನಡೆಸಿದ್ದಾರೆ.