Publish Date: Wed, 03 Oct 2018 (15:13 IST)
Updated Date: Wed, 03 Oct 2018 (15:16 IST)
ಕ್ವಾಟ್ಲೆ ಸತೀಶನ ಜೀವನದಲ್ಲಿ ಶ್ರೇಷ್ಠವಾದ ಘಟನೆ ನಡೆದಿದೆ. ಈ ಕಾಕತಾಳೀಯ ಘಟನೆಯಿಂದ ಹೆಮ್ಮೆ ಪಡುವಂತಾದ ಸತೀಶ್ ನಿನಾಸಂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ರೆಬಲ್ ಸ್ಟಾರ್ ಅಂಬರೀಶ್ ಕಟೌಟ್ ಪಕ್ಕದಲ್ಲೇ ತನ್ನ ಕಟೌಟ್ ನಿಂತಿರುವುದಕ್ಕೆ ಹೆಮ್ಮೆ ಪಡುತ್ತಿರುವ ಸತೀಶ್, ಇದೊಂದು ರೀತಿಯ ಕಾಕತಾಳೀಯ. ಅಂಬಿ ಅಣ್ಣನ, ಅಂಬಿ ನಿನಗೆ ವಯಸ್ಸಾಯ್ತೋ ಚಿತ್ರ ಮಂಡ್ಯದ ಸಿದ್ದಾರ್ಥ ಚಿತ್ರಮಂದಿರದಲ್ಲಿ ಬಿಡುಗೆಡಯಾಗಿದ್ದರೆ, ಪಕ್ಕದ ಸಂಜಯ ಚಿತ್ರಮಂದಿರದಲ್ಲಿ ನನ್ನ ಅಯೋಗ್ಯ ಚಿತ್ರ ಪ್ರದರ್ಶನ ಕಾಣುತ್ತಿದೆ. ನನ್ನದು 50ನೇ ದಿನ.
ಇದಲ್ಲವೇ ಹೆಮ್ಮೆಯ ವಿಷಯ, ಒಂದು ಕಾಲದಲ್ಲಿ ಅಂಬರೀಶ್ ಅವರ ಚಿತ್ರಕ್ಕಾಗಿ ಟಿಕೆಟ್ ಗೆ ಕ್ಯೂನಲ್ಲಿ ಅದೇ ಚಿತ್ರಮಂದಿರದಲ್ಲಿ ನಿಂತಿದ್ದೆ. ಇಂದು ಅವರ ಕಟೌಟ್ ಪಕ್ಕದಲ್ಲೇ ನನ್ನದು ಒಂದು ಕಟೌಟ್ ನಿಂತಿದೆ. ಇದೊಂದು ನನ್ನ ವೃತ್ತಿ ಬದುಕಿನಲ್ಲೇ ಶ್ರೇಷ್ಠವಾದದ್ದು. ಅವರ ಜೊತೆ ಅಭಿನಯಿಸೋ ಹಂಬಲ ಇನ್ನು ಇದೆ. ಅವರ ಆಶೀರ್ವಾದ ನಮ್ಮ ಜೊತೆಗಿದೆ. ಈ ವಾರ ನೋಡುವೆ ಅಂಬಿ ನಿನಗೆ ವಯಸ್ಸಾಯ್ತೋ. ನೀವೆಲ್ಲರೂ ನೋಡಿ ಅಂತ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.