Select Your Language

Notifications

webdunia
webdunia
webdunia
webdunia

ಅರಣ್ಯ ಚಾರಣದಲ್ಲಿ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು

ಅರಣ್ಯ ಚಾರಣದಲ್ಲಿ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಕಲಬುರಗಿ , ಭಾನುವಾರ, 30 ಸೆಪ್ಟಂಬರ್ 2018 (20:15 IST)
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯಿಂದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ  ಏರ್ಪಡಿಸಲಾಗಿದ್ದ ಚಂದ್ರಂಪಳ್ಳಿ ಅರಣ್ಯ ಚಾರಣ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಚಂದ್ರಂಪಳ್ಳಿ ಅರಣ್ಯ ಪ್ರದೇಶದಲ್ಲಿ ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು.

ಅರಣ್ಯ ಚಾರಣ (ಫಾರೆಸ್ಟ್ ಟ್ರಕ್ಕಿಂಗ್) ಪ್ರವಾಸದಲ್ಲಿ ನಾವು ಪ್ರಥಮ ಬಾರಿಗೆ ಪಾಲ್ಗೊಂಡಿದ್ದು, ಅರಣ್ಯದ ಎತ್ತರ ಮತ್ತು ಇಳಿಜಾರು ಪ್ರದೇಶಗಳನ್ನು ದಾಟುವಾಗ ರೋಮಾಂಚನಕಾರಿ ಅನುಭವವಾಯಿತು. ಅರಣ್ಯದಲ್ಲಿ ವಿವಿಧ ಜಾತಿಯ ಮರಗಳು, ಪಕ್ಷಿಗಳನ್ನು ನೋಡಿ ತಿಳಿಯಲು ಅನುಕೂಲವಾಯಿತು. ನಮ್ಮ ಕಲಬುರಗಿ ಜಿಲ್ಲೆಯಲ್ಲಿ ಇಂಥದೊಂದು ಸುಂದರವಾದ ಕಾಡಿದೆ ಎಂಬುದಕ್ಕೆ ಬಹಳ ಸಂತೋಷವಾಗುತ್ತಿದೆ ಎಂದು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮುಜೈದಾ ಖಾತೂನ ತನ್ನ ಅನುಭವವನ್ನು ಹಂಚಿಕೊಂಡು ಹರ್ಷವ್ಯಕ್ತಪಡಿಸಿದರು.

ಇದೇ ಕಾಲೇಜಿನ ಲಕ್ಷ್ಮೀ ಎಂಬ ವಿದ್ಯಾರ್ಥಿನಿ ಸ್ನೇಹಿತರ ಜೊತೆ ಅರಣ್ಯ ಚಾರಣ ಮಾಡಿರುವುದು ತುಂಬಾ ಖುಷಿ ತಂದಿದೆ. ಅರಣ್ಯ ಚಾರಣ ಪ್ರತಿ ತಿಂಗಳಿಗೊಂದು ಬಾರಿ ಕೈಗೊಂಡಲ್ಲಿ ದೇಹ ಆರೋಗ್ಯಯುತವಾಗಲು ಸಹಕಾರಿಯಾಗುತ್ತದೆ ಎಂದರು.
ಅರಣ್ಯ ಚಾರಣದಲ್ಲಿ ಪಾಲ್ಗೊಂಡಿದ್ದ ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ ಮಾತನಾಡಿ, ಚಂದ್ರಂಪಳ್ಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸರ್ಕಾರವು 3.5 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಚಂದ್ರಂಪಳ್ಳಿ ಡ್ಯಾಂನಲ್ಲಿ ಜಲಕ್ರೀಡೆ ಅಭಿವೃದ್ಧಿಪಡಿಸುವ ಜೊತೆಗೆ ಚಂದ್ರಂಪಳ್ಳಿ ಅರಣ್ಯವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕೆಂದು ತಿಳಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿಯ ದಸರಾದ ಮತ್ತೊಂದು ವಿಶೇಷ ಏನು ಗೊತ್ತಾ?