Publish Date: Sun, 09 Sep 2018 (07:06 IST)
Updated Date: Sun, 09 Sep 2018 (07:08 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದಿದ್ದಾರೆ.
ಶನಿವಾರ ಬೆಳಿಗ್ಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಕ್ರಿಕೆಟ್ ಕಪ್ (ಕೆಸಿಸಿ) ಆರಂಭಕ್ಕಾಗಿ ಸಿದ್ಧತೆ ನಡೆಸಲಾಗಿತ್ತು. ಇದಕ್ಕಾಗಿ ಹಲವು ನಟರು, ನಿರ್ಮಾಪಕರು, ಕಲಾವಿದರು ಆಗಮಿಸಿದ್ದರು. ನಟ ಅಂಬರೀಶ್ ಕೂಡ ಬೆಳಗ್ಗೆಯಿಂದ ಕ್ರೀಡಾಂಗಣದಲ್ಲೇ ಇದ್ದರು, ಆದರೆ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಸುಸ್ತಾಗಿದ್ದ ಅಂಬರೀಶ್ ಅವರು ಕುಸಿದು ಬಿದ್ದಿದ್ದಾರೆ.
ತಕ್ಷಣ ಅಂಬರೀಶ್ ಅವರನ್ನು ಆಸ್ಪತೆಗೆ ಕರೆದ್ಯೊಯ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ಅಂಬರೀಶ್ ಅವರು ಮನೆಗೆ ತೆರಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.