Select Your Language

Notifications

webdunia
webdunia
webdunia
webdunia

ಅಂಬಿ ತವರಲ್ಲಿ ಅಭಿಮಾನಿಗಳು ಫುಲ್ ಖುಷ್

ಅಂಬಿ ತವರಲ್ಲಿ ಅಭಿಮಾನಿಗಳು ಫುಲ್ ಖುಷ್
ಮಂಡ್ಯ , ಗುರುವಾರ, 27 ಸೆಪ್ಟಂಬರ್ 2018 (15:00 IST)
14 ವರ್ಷಗಳ ಬಳಿಕ ರೆಬೆಲ್ ಸ್ಟಾರ್ ಅಂಬರೀಷ್ ಪರಿಪೂರ್ಣ ನಾಯಕನಾಗಿ "ಅಂಬಿ ನಿಂಗ್ ವಯಸ್ಸಾಯ್ತೋ" ಚಿತ್ರ ಮೂಲಕ ಬೆಳ್ಳಿ ತೆರೆಮೇಲೆ‌ ಕಾಣಿಸಿಕೊಳ್ತಿರೋದಕ್ಕೆ ಅಭಿಮಾನಿಗಳ ಹರ್ಷೋಧ್ಘಾರ ಮುಗಿಲು ಮಟ್ಟಿತ್ತು.

ಅಂಬರೀಷ್ ತವರೂರು ಮಂಡ್ಯದಲ್ಲಿ ಅಂಬಿ, ಅಭಿಮಾನಿಗಳು ಸಂಭ್ರಮ ಸಡಗರದಲ್ಲಿ ತೆಲಾಡಿದರು. ಮಂಡ್ಯ ನಗರದ ಸಿಲ್ವರ್ ಜೂಬಿಲಿ ಪಾರ್ಕ್ ನಿಂದ ಸಿಧ್ದಾರ್ಥ ಚಿತ್ರ ಮಂದಿರವರೆಗೆ ವಿವಿಧ ಕಲಾತಂಡಗಳು ಹಾಗೂ ನೂರಾರು ಆಟೋಗಳೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದ ಅಭಿಮಾನಿಗಳು, ಸಿದ್ದಾರ್ಥ ಚಿತ್ರ ಮಂದಿರದ ಬಳಿ ಅಂಬಿ ಭಾವಚಿತ್ರ ಹಿಡಿದು ರೆಬೆಲ್ ಸ್ಟಾರ್ ಗೆ ಜೈಕಾರ ಹಾಕಿದರು. ಈ ವೇಳೆ ಅಂಬಿ ಅಭಿಮಾನಿಗಳು ಆಯೋಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾನು ಅಂಬರೀಷ್ ಅವ್ರ ಪಕ್ಕಾ ಅಭಿಮಾನಿ ಹಾಗಾಗಿ ಅಂಬಿ ಅವ್ರ ಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಅಂಬರೀಷ್ ಅವ್ರನ್ನ ನೋಡ್ತಿದ್ರೆ ಇನ್ನೂ ವಯಸ್ಸಾದಂತೆ ಕಾಣ್ತಿಲ್ಲ‌ ಎಂದರು. ಹಲವು ವರ್ಷಗಳ ನಂತ್ರ ಪರಿಪೂರ್ಣ ನಾಯಕನಟನಾಗಿ ರೆಬಲ್ ಸ್ಟಾರ್ ಅಂಬರೀಶ್ ರನ್ನು ತೆರೆಯ ಮೇಲೆ ಕಂಡ ಅಭಿಮಾನಿಗಳು ಫುಲ್‌ಖುಷ್ ಆಗಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ವಿಶ್ವಸಂಸ್ಥೆಯ ಅತಿದೊಡ್ಡ ಪ್ರಶಸ್ತಿ: ಈ ಪ್ರಶಸ್ತಿ ಸಿಕ್ಕಿದ್ದು ಯಾಕೆ?