Select Your Language

Notifications

webdunia
webdunia
webdunia
webdunia

ಶತಕ ಗಳಿಸಿದರೂ ಕೆಎಲ್ ರಾಹುಲ್ ರನ್ನು ಲೇವಡಿ ಮಾಡುವುದನ್ನು ಬಿಡದ ಅಭಿಮಾನಿಗಳು

ಶತಕ ಗಳಿಸಿದರೂ ಕೆಎಲ್ ರಾಹುಲ್ ರನ್ನು ಲೇವಡಿ ಮಾಡುವುದನ್ನು ಬಿಡದ ಅಭಿಮಾನಿಗಳು
ದಿ ಓವಲ್ , ಬುಧವಾರ, 12 ಸೆಪ್ಟಂಬರ್ 2018 (08:55 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಅಂತಿಮ ಟೆಸ್ಟ್ ಪಂದ್ಯದ ಅಂತಿಮ ಪಂದ್ಯದಲ್ಲಿ ಶತಕ ಗಳಿಸಿದರೂ ಕೆಎಲ್ ರಾಹುಲ್ ಮೇಲೆ ಅಭಿಮಾನಿಗಳಿಗೆ ಕೋಪ ಹೋದಂತೆ ಕಾಣಲಿಲ್ಲ.

ಶತಕ ಗಳಿಸಿದ ಮೇಲೂ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಲೇವಡಿ ಮಾಡಿದ್ದಾರೆ. ಅಂತೂ ಶತಕ ಗಳಿಸಿ ಮುಂದಿನ ಎರಡು ವರ್ಷಗಳಿಗೆ ತಂಡದಲ್ಲಿ ಸ್ಥಾನ ಭದ್ರಗೊಳಿಸಿದರು ಎಂದು ಕೆಲವರು ವ್ಯಂಗ್ಯ ಮಾಡಿದರೆ ಇನ್ನು ಕೆಲವರು ವಿರಾಟ್ ಕೊಹ್ಲಿಯನ್ನು ಸಂತೃಪ್ತಿಗೊಳಿಸಲು ಯಶಸ್ವಿಯಾದರು ಎಂದು ಟಾಂಗ್ ಕೊಟ್ಟಿದ್ದಾರೆ.

ಐದನೇ ಶತಕ ಗಳಿಸಿದ ರಾಹುಲ್ ಅಪರೂಪದ ದಾಖಲೆಯನ್ನೂ ಮಾಡಿದ್ದಾರೆ. ವಿದೇಶದಲ್ಲಿ ಪಂದ್ಯದ ನಾಲ್ಕನೇ ಇನಿಂಗ್ಸ್ ನಲ್ಲಿ ಶತಕ ಗಳಿಸಿದ ಭಾರತೀಯ ಆಟಗಾರರ ಪೈಕಿ ಸುನಿಲ್ ಗವಾಸ್ಕರ್ ನಂತರ ಎರಡನೇ ಆಟಗಾರ ಎನಿಸಿಕೊಂಡರು. ಗವಾಸ್ಕರ್ 1979 ರಲ್ಲಿ ಇದೇ ಓವಲ್ ಮೈದಾನದಲ್ಲಿ 221 ರನ್ ಗಳಿಸಿದ್ದರು. ಇಂದು ಅದೇ ಮೈದಾನದಲ್ಲಿ ಮತ್ತೆ ರಾಹುಲ್ ದ್ವಿತೀಯ ಇನಿಂಗ್ಸ್ ಶತಕ ಗಳಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸೋಲಿನ ನಡುವೆ ಟೀಂ ಇಂಡಿಯಾಕ್ಕೆ ಸಿಕ್ಕಿದ ಸಮಾಧಾನವೇನು ಗೊತ್ತಾ?