ಕೊಚ್ಚಿ: ಟೀಂ ಇಂಡಿಯಾ ಯುವ ಕ್ರಿಕೆಟಿಗ ಕೇರಳ ಮೂಲದ ಸಂಜು ಸ್ಯಾಮ್ಸನ್ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ಬೇರೆಯದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಮೊನ್ನೆಯಷ್ಟೇ ತಮ್ಮ ರಾಜ್ಯ ತಂಡದ ನಾಯಕನನ್ನು ಅವಹೇಳನ ಮಾಡಿದ್ದಕ್ಕೆ ಸಂಜು ಸ್ಯಾಮ್ಸನ್ ದಂಡನೆಗೊಳಗಾಗಿದ್ದರು. ಅದಕ್ಕೂ ಮೊದಲು ಹಲವು ಬಾರಿ ರಣಜಿ ಪಂದ್ಯಗಳಲ್ಲಿ ಆಟಾಟೋಪ ತೋರಿ ಶಿಕ್ಷೆಗೊಳಗಾಗಿದ್ದರು.
ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ವರ್ಷ ಡಿಸೆಂಬರ್ ನಲ್ಲಿ ತಮ್ಮ ಕ್ಲಾಸ್ ಮೇಟ್ ಚಾರು ಅವರನ್ನು ಮದುವೆಯಾಗುತ್ತಿರುವುದಾಗಿ ಸಂಜು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.