Select Your Language

Notifications

webdunia
webdunia
webdunia
webdunia

ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ ಅಲೆಸ್ಟರ್ ಕುಕ್

ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ ಅಲೆಸ್ಟರ್ ಕುಕ್
ದಿ ಓವಲ್ , ಸೋಮವಾರ, 10 ಸೆಪ್ಟಂಬರ್ 2018 (17:37 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ.

ಅಂತಿಮ ಪಂದ್ಯವಾಡುತ್ತಿರುವ ಅಲೆಸ್ಟರ್ ಕುಕ್ ಶತಕ (103) ಸಿಡಿಸಿ ಕೊನೆಯ ಇನಿಂಗ್ಸ್ ನ್ನು ಸ್ಮರಣೀಯವಾಗಿಸಿದರು. ಅಷ್ಟೇ ಅಲ್ಲದೆ, ದ್ವಿತೀಯ ಇನಿಂಗ್ಸ್ ನಲ್ಲಿ ಅತೀ ಹೆಚ್ಚು ಶತಕ ದಾಖಲಿಸಿದ ಕುಮಾರ್ ಸಂಗಕ್ಕಾರ ದಾಖಲೆಯನ್ನು ಮುರಿದರು. ಕುಕ್ ದ್ವಿತೀಯ ಇನಿಂಗ್ಸ್ ಶತಕದ ಸಂಖ್ಯೆ ಇದೀಗ 15 ಕ್ಕೇರಿದೆ.

ಕುಕ್ ಗೆ ತಕ್ಕ ಸಾಥ್ ನೀಡಿರುವ ನಾಯಕ ಜೋ ರೂಟ್ ಕೂಡಾ 93 ರನ್ ಗಳಿಸಿದ್ದು ಶತಕದ ಹಾದಿಯಲ್ಲಿದ್ದಾರೆ. ಈ ಇಬ್ಬರೂ ಆಟಗಾರರೂ ಟೀಂ ಇಂಡಿಯಾ ಬೌಲರ್ ಗಳನ್ನು ಅಕ್ಷರಶಃ ಬೆವರಿಳಿಸಿದರು. ಇದರಿಂದಾಗಿ ಇಂಗ್ಲೆಂಡ್ ಮುನ್ನಡೆ 283 ರನ್ ಗೆ ಏರಿಕೆಯಾಗಿದೆ. ಈ ಜೋಡಿ ಟೀಂ ಇಂಡಿಯಾಕ್ಕೆ ಕಂಟಕವಾಗುವ ಎಲ್ಲಾ ಲಕ್ಷಣಗಳೂ ತೋರುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ದಾಖಲೆ ಮುರಿದು ದಿಗ್ಗಜರ ಸಾಲಿಗೆ ಸೇರಿದ ವಿರಾಟ್ ಕೊಹ್ಲಿ