Publish Date: Mon, 10 Sep 2018 (08:42 IST)
Updated Date: Mon, 10 Sep 2018 (08:44 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ನ ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 114 ರನ್ ಗಳಿಸುವ ಮೂಲಕ ಉತ್ತಮ ಸ್ಥಿತಿಯಲ್ಲಿದೆ.
ಈಗಾಗಲೇ ಮೊದಲ ಇನಿಂಗ್ಸ್ ನ 40 ರನ್ ಗಳ ಮುನ್ನಡೆಯನ್ನೂ ಹೊಂದಿರುವ ಇಂಗ್ಲೆಂಡ್ ಟೆಸ್ಟ್ ಪಂದ್ಯದ ಮೇಲೆ ತನ್ನ ಬಿಗಿ ಹಿಡಿತ ಮುಂದುವರಿಸಿದೆ. ದಿನದಂತ್ಯಕ್ಕೆ ನಾಯಕ ಜೋ ರೂಟ್ 29 ರನ್ ಮತ್ತು ಅಲೆಸ್ಟರ್ ಕುಕ್ 46 ರನ್ ಗಳಿಸಿ ಕ್ರೀಸ್ ನಲ್ಲಿದ್ದರು.
ಇದೇ ಅಂತಿಮ ಬಾರಿಗೆ ಬ್ಯಾಟ್ ಹಿಡಿದು ಕಣಕ್ಕಿಳಿದ ಅಲೆಸ್ಟರ್ ಕುಕ್ ಗೆ ಇಡೀ ಮೈದಾನವೇ ಎದ್ದು ನಿಂತು ಗೌರವ ಸೂಚಿಸಿತು. ಇಂಗ್ಲೆಂಡ್ ಹಿರಿಯ ಆಟಗಾರನಿಗೆ ಮೊದಲ ಇನಿಂಗ್ಸ್ ನಲ್ಲಿ ಆಡಲಿಳಿದಾಗ ಟೀಂ ಇಂಡಿಯಾ ಆಟಗಾರರೂ ಸಾಲಾಗಿ ನಿಂತು ಗೌರವ ಸೂಚಿಸಿದ್ದರು. ನಿನ್ನೆ ನಾಟೌಟ್ ಆಗಿ ಉಳಿದಿದ್ದ ಕುಕ್ ಇಂದು ಅಂತಿಮ ಬಾರಿಗೆ ಬ್ಯಾಟ್ ಮಾಡುವ ಅವಕಾಶ ಪಡೆದಿದ್ದಾರೆ. ಅದನ್ನು ಅವರು ಸ್ಮರಣೀಯವಾಗಿಸುತ್ತಾರಾ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.