ಕನ್ನಡಿಗ ಕರುಣ್ ನಾಯರ್ ವಿಚಾರದಲ್ಲಿ ವಿವಾದಕ್ಕೀಡಾದ ವಿರಾಟ್ ಕೊಹ್ಲಿ

ಶನಿವಾರ, 8 ಸೆಪ್ಟಂಬರ್ 2018 (09:56 IST)
ದಿ ಓವಲ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯಕ್ಕೆ ಕನ್ನಡಿಗ ಬ್ಯಾಟ್ಸ್ ಮನ್ ಕರುಣ್ ನಾಯರ್ ಕಡೆಗಣಿಸಿ ಹನುಮ ವಿಹಾರಿಗೆ ಚೊಚ್ಚಲ ಟೆಸ್ಟ್ ಆಡಲು ಅವಕಾಶ ಕೊಟ್ಟ ನಾಯಕ ವಿರಾಟ್ ಕೊಹ್ಲಿ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರ ತ್ರಿಶತಕ ಭಾರಿಸಿದ ದ್ವಿತೀಯ ಬ್ಯಾಟ್ಸ್ ಮನ್ ಆಗಿರುವ ಕರುಣ್ ತಂಡಕ್ಕೆ ಆಯ್ಕೆಯಾಗಿದ್ದರೂ ಇದುವರೆಗೆ ಆಡುವ ಅವಕಾಶ ಪಡೆದಿಲ್ಲ. ಇಂತಹ ಪ್ರತಿಭಾವಂತನ ಬದಲು ಈಗಷ್ಟೇ ತಂಡಕ್ಕೆ ಆಯ್ಕೆಯಾಗಿರುವ ಹನುಮ ವಿಹಾರಿಯನ್ನು ಆಯ್ಕೆ ಮಾಡಿರುವುದು ಯಾಕೆ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, ಕಾಮೆಂಟೇಟರ್ ಹರ್ಷ ಭೋಗ್ಲೆ ಸೇರಿದಂತೆ ಅಭಿಮಾನಿಗಳೂ ಪ್ರಶ್ನಿಸುತ್ತಿದ್ದಾರೆ.

ಕರುಣ್ ವಿಚಾರದಲ್ಲಿ ಕೊಹ್ಲಿ ಅನ್ಯಾಯ ಮಾಡಿದ್ದಾರೆಂದು ಹರ್ಷ ಭೋಗ್ಲೆ ಆಕ್ಷೇಪ ವ್ಯಕ್ತಪಡಿಸಿದರೆ, ಕರುಣ್ ನಾಯರ್ ರನ್ನು ಕಡೆಗಣಿಸಿರುವುದು ಶುದ್ಧ ನಾನ್ಸೆನ್ಸ್ ಎಂದು ಸುನಿಲ್ ಗವಾಸ್ಕರ್ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಾಜಿ ಕ್ರಿಕೆಟಿಗರಿಗೆ ಅವಮಾನ ಮಾಡಿದ ರವಿಶಾಸ್ತ್ರಿಗೆ ಮುಟ್ಟಿನೋಡಿಕೊಳ್ಳು ವಂತೆ ಏಟು ಕೊಟ್ಟ ಸುನಿಲ್ ಗವಾಸ್ಕರ್