Publish Date: Sat, 08 Sep 2018 (17:43 IST)
Updated Date: Sat, 08 Sep 2018 (17:45 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ನ ಎರಡನೇ ದಿನ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 304 ರನ್ ಗಳಿಸಿದೆ.
ಭಾರತದ ಪಾಲಿಗೆ ಜೋಸ್ ಬಟ್ಲರ್ ಮತ್ತು ಸ್ಟುವರ್ಟ್ ಬ್ರಾಡ್ ಜೋಡಿ ಕಂಟಕವಾಗಿ ಕಾಡುತ್ತಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳನ್ನು ಬೇಗನೇ ಪೆವಿಲಿಯನ್ ಗೆ ಅಟ್ಟಿದ್ದ ಟೀಂ ಇಂಡಿಯಾ ವೇಗಿಗಳು ಈ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಲು ತಿಣುಕಾಡುತ್ತಿದ್ದಾರೆ.
ಅದರಲ್ಲೂ ಬಟ್ಲರ್ 63 ರನ್ ಸಿಡಿಸಿ ಬೌಲರ್ ಗಳನ್ನು ಅಕ್ಷರಶಃ ಸತಾಯಿಸುತ್ತಿದ್ದಾರೆ. ಇನ್ನು, ಸ್ಟುವರ್ಟ್ ಬ್ರಾಡ್ ಕೂಡಾ 36 ರನ್ ಗಳಿಸಿ ಅವರಿಗೆ ತಕ್ಕ ಸಾಥ್ ನೀಡುತ್ತಿದ್ದಾರೆ. ಭೋಜನ ವಿರಾಮದ ನಂತರ ಬೇಗನೇ ಟೀಂ ಇಂಡಿಯಾ ಎದುರಾಳಿಗಳನ್ನು ಆಲೌಟ್ ಮಾಡದೇ ಹೋದಲ್ಲಿ ಹಾದಿ ಕಠಿಣವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.