Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಶತಕ ಗಳಿಸಿದಾಗ ಪೆವಿಲಿಯನ್ ನಲ್ಲಿದ್ದ ವಿರಾಟ್ ಕೊಹ್ಲಿ ಮಾಡಿದ್ದೇನು ಗೊತ್ತಾ?!

ಕೆಎಲ್ ರಾಹುಲ್ ಶತಕ ಗಳಿಸಿದಾಗ ಪೆವಿಲಿಯನ್ ನಲ್ಲಿದ್ದ ವಿರಾಟ್ ಕೊಹ್ಲಿ ಮಾಡಿದ್ದೇನು ಗೊತ್ತಾ?!
ದಿ ಓವಲ್ , ಮಂಗಳವಾರ, 11 ಸೆಪ್ಟಂಬರ್ 2018 (17:31 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಐದನೇ ದಿನ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದೆ. ಕೆಎಲ್ ರಾಹುಲ್ ಶತಕ ಗಳಿಸಿ ಅಭಿಮಾನಿಗಳಿಗೆ ಸಂತಸ ನೀಡಿದ್ದಾರೆ.

ನಿನ್ನೆ 2 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಕೆಎಲ್ ರಾಹುಲ್ ಮತ್ತು ಅಜಿಂಕ್ಯಾ ರೆಹಾನೆ ಜೋಡಿ ಮೇಲೆತ್ತಿತ್ತು. ಏಕದಿನ ಶೈಲಿಯಲ್ಲಿ ಆಡಿದ ಕೆಎಲ್ ರಾಹುಲ್ ಇಂದು ಸೊಗಸಾದ ಶತಕ ಗಳಿಸಿದರು. ರಾಹುಲ್ ಶತಕ ಗಳಿಸಿ ಸಂಭ್ರಮಿಸಲು ಅರೆ ಕ್ಷಣ ಯೋಚಿಸುತ್ತಿದ್ದರೆ ಪೆವಿಲಿಯನ್ ನಲ್ಲಿ ಕೂತಿದ್ದ ನಾಯಕ ವಿರಾಟ್ ಕೊಹ್ಲಿ ಅದಕ್ಕೇ ಕಾದಿದ್ದವರಂತೆ ಎದ್ದು ನಿಂತು ಚಪ್ಪಾಳೆ ತಟ್ಟಿ ಖುಷಿಪಟ್ಟರು.

ಸೊಗಸಾಗಿ ಆಡುತ್ತಿದ್ದ ರಾಹುಲ್ ಗೆ ರೆಹಾನೆ 37 ರನ್ ಗಳಿಸಿ ಅವರಿಗೆ ತಕ್ಕ ಸಾಥ್ ನೀಡಿದರು. ಈ ಇಬ್ಬರೂ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಜತೆಯಾಡುತ್ತಿರುವುದು ವಿಶೇಷ. ಆದರೆ ದುರದೃಷ್ಟವಶಾತ್ ರೆಹಾನೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಹನುಮ ವಿಹಾರಿ ಕೂಡಾ ಶೂನ್ಯಕ್ಕೆ ನಿರ್ಗಮಿಸಿದರು. ಸದ್ಯಕ್ಕೆ ರಾಹುಲ್ 108 ರನ್ ಮತ್ತು ರಿಷಬ್ ಪಂತ್ 12 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಇಂದು ಕೊನೆಯ ದಿನವಾಗಿದ್ದು, ಟೀಂ ಇಂಡಿಯಾ ಸೋಲು ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ. ಗೆಲುವಿಗೆ ಇನ್ನೂ 297 ರನ್ ಗಳ ಗುರಿ ಬೆನ್ನತ್ತಬೇಕಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟವೇ. ಹಾಗಿದ್ದರೂ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಅಥವಾ ಡ್ರಾ ಮಾಡಿಕೊಳ್ಳಲು ಟೀಂ ಇಂಡಿಯಾ ಆಟಗಾರರು ಬೆವರು ಸುರಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಯನ್ನು ಕೆಣಕಬೇಡಿ ಎಂದು ಆಸ್ಟ್ರೇಲಿಯನ್ನರಿಗೆ ಎಚ್ಚರಿಕೆ ನೀಡಿದ ಗಿಲ್ ಕ್ರಿಸ್ಟ್