Select Your Language

Notifications

webdunia
webdunia
webdunia
webdunia

ಧೋನಿ ಮತ್ತೆ ನಾಯಕನಾಗಿದ್ದು ನೋಡಿ ಹುಚ್ಚೆದ್ದು ಕುಣಿದ ಅಭಿಮಾನಿಗಳು! ಮಹಿ ಹೇಳಿದ್ದೇನು?

ಧೋನಿ ಮತ್ತೆ ನಾಯಕನಾಗಿದ್ದು ನೋಡಿ ಹುಚ್ಚೆದ್ದು ಕುಣಿದ ಅಭಿಮಾನಿಗಳು! ಮಹಿ ಹೇಳಿದ್ದೇನು?
ದುಬೈ , ಬುಧವಾರ, 26 ಸೆಪ್ಟಂಬರ್ 2018 (08:56 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯ ಮಹತ್ವದ್ದಲ್ಲವೆಂದು ಕುಳಿತಿದ್ದವರಿಗೆ ಟೀಂ ಇಂಡಿಯಾ ಧೋನಿ ಮೂಲಕ ದೊಡ್ಡ ಅಚ್ಚರಿಯನ್ನೇ ನೀಡಿತು.

ಈ ಪಂದ್ಯವನ್ನು ಮಹತ್ವದ್ದಲ್ಲವೆಂದು ನೋಡದೇ ಇರಲು ತೀರ್ಮಾನಿಸಿದ್ದವರೂ ಮತ್ತೆ ಟಿವಿ ಮುಂದೆ ಕೂರುವಂತೆ ಮಾಡಿದ್ದು ಧೋನಿ ಮತ್ತೆ ನಾಯಕನಾದ ವಿಚಾರ.

ಏಕದಿನ ಪಂದ್ಯಗಳಲ್ಲಿ 199 ಪಂದ್ಯಗಳಲ್ಲಿ ನಾಯಕರಾಗಿ ನಿವೃತ್ತಿಯಾದ ಧೋನಿ ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಉದ್ದೇಶದಿಂದ ಮತ್ತೆ ಕ್ಯಾಪ್ಟನ್ ಆದರು. ಇದರೊಂದಿಗೆ ತಮ್ಮ ನಾಯಕತ್ವದ ಪಂದ್ಯವನ್ನು ಭರ್ತಿ 200 ಕ್ಕೆ ಏರಿಸಿದರು.

ಬಹುಶಃ ಇದು ದೈವೇಚ್ಛೆ ಆಗಿದ್ದಿರಬೇಕು. ನಾನು ಮತ್ತೆ ನಾಯಕನಾಗಬೇಕೆಂಬುದು ನನ್ನ ನಿಯಂತ್ರಣದಲ್ಲಿರಲಿಲ್ಲ. ಆದರೆ 199 ಏಕದಿನದಲ್ಲಿ ನಾಯಕನಾಗಿದ್ದೆ, ಅದನ್ನೀಗ 200 ಕ್ಕೆ ಆಗಿಸುವ ಅವಕಾಶ ಸಿಕ್ಕಿದೆ. ಆದರೆ ಇದು ದೊಡ್ಡ ವಿಚಾರವಲ್ಲ. ಎಲ್ಲವೂ ಅವನಿಚ್ಛೆ ಎಂದು ಧೋನಿ ಟಾಸ್ ಸಂದರ್ಭದಲ್ಲಿ ಹೇಳಿಕೊಂಡರು.

ಆದರೆ ಧೋನಿ ಮತ್ತೆ ನಾಯಕನಾಗಿದ್ದು ಅಭಿಮಾನಿಗಳನ್ನು ಹುಚ್ಚೆಬ್ಬಿಸಿತು. ಸಾಮಾಜಿಕ ಜಾಲತಾಣದಲ್ಲಂತೂ ಧೋನಿ ಮತ್ತೆ ನಾಯಕನಾಗಿರುವುದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತು. ತಲಾ ಈಸ್ ಬ್ಯಾಕ್ ಎಂದು ತಮಿಳುನಾಡಿನ ಅಭಿಮಾನಿಗಳು ಕೊಂಡಾಡಿದರೆ, ಮತ್ತೆ ಧೋನಿಯನ್ನು ನಾಯಕನಾಗಿ ನೋಡುವುದೇ ಹಬ್ಬ ಎಂದು ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಇನ್ನು ಕೆಲವರು ಈ ಅವಕಾಶ ಮಾಡಿಕೊಟ್ಟ ರೋಹಿತ್ ಶರ್ಮಾಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಗೆಲ್ಲಲೂ ಆಗದೆ ಸೋಲೂ ಇಲ್ಲದೇ ಟೀಂ ಇಂಡಿಯಾ ಕ್ರಿಕೆಟಿಗರ ಕಣ್ಣೀರು!