ದುಬೈ: ಪಾಕಿಸ್ತಾನದ ವಿರುದ್ಧ ಭರ್ಜರಿಯಾಗಿ ಗೆದ್ದು ಏಷ್ಯಾ ಕಪ್ ಫೈನಲ್ ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾಕ್ಕೆ ಇಂದು ಔಪಚಾರಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಎದುರಾಗಲಿದೆ.
									
			
			 
 			
 
 			
					
			        							
								
																	ಹೇಗಿದ್ದರೂ ಫೈನಲ್ ಗೇರಿಯಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಇದುವರೆಗೆ ಆಡಲು ಅವಕಾಶ ಸಿಗದ ಕ್ರಿಕೆಟಿಗರಿಗೆ ರೋಹಿತ್ ಶರ್ಮಾ ಛಾನ್ಸ್ ನೀಡಿದರೂ ಅಚ್ಚರಿಯಿಲ್ಲ.
									
										
								
																	ಕೆಎಲ್ ರಾಹುಲ್, ಮನೀಶ್ ಪಾಂಡೆ ಇದುವರೆಗೆ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿಲ್ಲ. ಇವರಲ್ಲಿ ಒಬ್ಬರಿಗಾದರೂ ಇಂದು ಸ್ಥಾನ ಸಿಗುವ ನಿರೀಕ್ಷೆಯಿದೆ. ಇನ್ನು, ಬೌಲಿಂಗ್ ವಿಭಾಗದಲ್ಲೂ ಪ್ರಮುಖ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾಗೆ ಫೈನಲ್ ಗೆ ತಯಾರಾಗುವ ನಿಟ್ಟಿನಿಂದ ಇಂದು ವಿಶ್ರಾಂತಿ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.
									
											
							                     
							
							
			        							
								
																	ಅತ್ತ ಅಫ್ಘಾನಿಸ್ತಾನ ಈಗಾಗಲೇ ಕೂಟದಿಂದ ಹೊರಬಿದ್ದಿದೆ. ಈಗಾಗಲೇ ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ಧ ಸೋಲುಂಡಿರುವ ಅಫ್ಘನ್ ಗೆ ಟೀಂ ಇಂಡಿಯಾ ಮತ್ತಷ್ಟು ಕಠಿಣ ಎದುರಾಳಿ. ಬೌಲರ್ ರಶೀದ್ ಖಾನ್ ಒಬ್ಬರೇ ಅವರ ಪ್ರಮುಖ ಅಸ್ತ್ರ. ಆದರೂ ಟೀಂ ಇಂಡಿಯಾಕ್ಕೆ ಪೈಪೋಟಿ  ನೀಡುವುದು ಸುಲಭದ ಮಾತಲ್ಲ. ಸಂಜೆ 5 ಗಂಟೆಗೆ ಪಂದ್ಯ ನಡೆಯಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.
									
			                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.