Publish Date: Mon, 24 Sep 2018 (09:24 IST)
Updated Date: Mon, 24 Sep 2018 (09:25 IST)
ಮುಂಬೈ: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಕಳೆದ 15 ವರ್ಷಗಳಲ್ಲಿ ಭಾರತ ಕಂಡಂತಹ ಅತ್ಯುತ್ತಮ ಕ್ರಿಕೆಟ್ ತಂಡವೇ? ಈ ಪ್ರಶ್ನೆಗೆ ಭಾರತ ಎ ತಂಡದ ಕೋಚ್ ಕೂಡಾ ಆಗಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಉತ್ತರಿಸಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಭಾರತ 15 ವರ್ಷಗಳಲ್ಲೇ ಕಂಡ ಅತ್ಯುತ್ತಮ ತಂಡವಿದು ಎಂದು ಹೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ದ್ರಾವಿಡ್ ಅಭಿಪ್ರಾಯವೇನು?
‘ರವಿಶಾಸ್ತ್ರಿ ಕಾಮೆಂಟ್ ನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡವು. ಅವರ ಹೇಳಿಕೆ ಅವರು ಉದ್ದೇಶಿಸಿದ್ದಕ್ಕಿಂತ ಬೇರೆ ಅರ್ಥ ಪಡೆದುಕೊಂಡಿತು. ರವಿ ಆ ಅರ್ಥದಲ್ಲಿ ಹೇಳಿರಲಿಕ್ಕಿಲ್ಲ ಎಂಬುದು ನನ್ನ ಭಾವನೆ. ಆದರೆ ಸದ್ಯದ ಸನ್ನಿವೇಶದಲ್ಲಿ ಯಾವ ತಂಡ ಬೆಸ್ಟ್ ಎನ್ನುವುದು ಮುಖ್ಯವಲ್ಲ. ನಾವು ಇಂಗ್ಲೆಂಡ್ ಸರಣಿಯಿಂದ ಏನು ಕಲಿತೆವು ಎನ್ನುವುದು ಮುಖ್ಯ’ ಎಂದು ದ್ರಾವಿಡ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.