Publish Date: Sun, 23 Sep 2018 (10:08 IST)
Updated Date: Sun, 23 Sep 2018 (10:11 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಡಲು ಅಬುದಾಬಿಯಲ್ಲಿರುವ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಕ್ರಿಕೆಟಿಗರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ಸ್ಪೂರ್ತಿಯಂತೆ!
ಟೀಂ ಇಂಡಿಯಾ ನಾಯಕ ಫಿಟ್ನೆಸ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಅವರ ಫಿಟ್ನೆಸ್ ಹುಚ್ಚು ಅಫ್ಘನ್ ಆಟಗಾರರಿಗೆ ಪರೋಕ್ಷವಾಗಿ ಸ್ಪೂರ್ತಿಯಾಗಿದೆಯಂತೆ.
‘ಎಲ್ಲಾ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿಯೇ ಮಾದರಿ. ಅದರಲ್ಲೂ ಬೌಲರ್ ರಶೀದ್ ಖಾನ್ ಗೆ ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿಯೇ ಮಾದರಿ. ಕೊಹ್ಲಿಯಂತೇ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ತಾನು ಪರಿಶ್ರಮಪಡುವುದನ್ನು ನೋಡಿದರೆ ತನ್ನ ತಂಡವೂ ಅದರಿಂದ ಸ್ಪೂರ್ತಿ ಪಡೆದು ಪರಿಶ್ರಮಪಡುತ್ತದೆ ಎಂದು ಅವರಿಗೆ ಗೊತ್ತು. ಅದನ್ನೇ ಅವರು ಮಾಡುತ್ತಿದ್ದಾರೆ’ ಎಂದು ಆಫ್ಘನ್ ಟೀಂ ಮ್ಯಾನೇಜರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.