Publish Date: Sat, 22 Sep 2018 (09:43 IST)
Updated Date: Sat, 22 Sep 2018 (09:45 IST)
ಮುಂಬೈ: ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಮಾಡಿದ ತಮಾಷೆಯಿಂದ ನಟಿ ಅನುಷ್ಕಾ ಶರ್ಮಾ ನಾಚಿ ನೀರಾಗಿದ್ದಾರೆ.
ಕೆಬಿಸಿಯಲ್ಲಿ ಪಾಲ್ಗೊಂಡಿದ್ದ ಅನುಷ್ಕಾ ನಾನು ಕ್ರಿಕೆಟ್ ನ್ನು ಪತಿ ಕೊಹ್ಲಿ ಆಟ ನೋಡಲಷ್ಟೇ ನೋಡುವುದಿಲ್ಲ ಎಂದರು. ಆಗ ಅಮಿತಾಬ್ ಪಂದ್ಯದ ನಡುವೆ ಈ ಎರಡು ಪ್ರಣಯ ಪಕ್ಷಿಗಳ ನಡುವೆ ನಡೆಯುವ ಫ್ಲೈಯಿಂಗ್ ಕಿಸ್ ವಿನಿಮಯದ ಬಗ್ಗೆ ಪ್ರಶ್ನಿಸಿದರು.
ಇದಕ್ಕೆ ನಾಚಿ ನೀರಾದ ಅನುಷ್ಕಾ ನಕ್ಕು ಸುಮ್ಮನಾದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ತಮ್ಮ ಸಿನಿಮಾ ಪ್ರಚಾರಕ್ಕೆಂದು ಹೋಗಿದ್ದಾಗ ಇದೇ ರೀತಿ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಕೂಗಿ ಹೇಳಿದಾಗಲೂ ಅನುಷ್ಕಾ ನಾಚಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.